Actor Second Marriage : ತಮಿಳು ಸೂಪರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಟ ಧನುಷ್ ಎರಡನೇ ಮದುವೆಯಾಗಲಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸುಗುಸು ಶುರುವಾಗಿದೆ.

Actor Second Marriage : ತಮಿಳು ಸೂಪರ್ ಸ್ಟಾರ್ ಅಂತಲೇ ಫೇಮಸ್ ಆಗಿರುವ ನಟ ಧನುಷ್ 2004ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನ ಮದುವೆಯಾಗಿದ್ದರು. ಅವರಿಗೆ ಯಾತ್ರಾ ಮತ್ತು ಲಿಂಗಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ 2022ರಲ್ಲಿ ಇಬ್ಬರು ಬೇರ್ಪಡುವುದಾಗಿ ಘೋಷಿಸಿ. 2024ರಲ್ಲಿ ವಿಚ್ಚೇದನ ಪಡೆದರು.
ನಟ ಧನುಷ್ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನ ಮಾಡುತ್ತಿದ್ದಾರೆ. ಇದರ ಮಧ್ಯೆ ಅವರ ಮದುವೆ ಸುದ್ದಿ ಕೂಡ ಓಡಾಡುತ್ತಿರುತ್ತದೆ. ಆದರೆ ಇದೀಗ ನಟ ಧನುಷ್ ಎರಡನೇ ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ದೈವದ ಮೊರೆ ಹೋದ Rakshith Shetty

ಧನುಷ್ ಮತ್ತು ಬಾಲಿವುಡ್ ಸೌತ್ ನಟಿ ಮೃಣಾಲ್ ಠಾಕೂರ್ರನ್ನ ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ. 42 ವರ್ಷದ ಧನುಷ್ ಮತ್ತು 33 ವರ್ಷದ ಮೃಣಾಲ್ ಠಾಕೂರ್ ಫೆಬ್ರವರಿ 14, 2026 ರಂದು ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ. ಆಪ್ತರು ಮತ್ತು ಸ್ನೇಹಿತರು ಮದುವೆಗೆ ಭಾಗವಹಿಸಲಿದ್ದಾರೆ ಎನ್ನಲಾಗ್ತಿದೆ.
ಸನ್ ಆಫ್ ಸರ್ದಾರ್ 2 ಚಿತ್ರದ ಸ್ಕ್ರೀನಿಂಗ್ಗೆ ಮುಂಬೈಗೆ ಹೋಗಿದ್ದಾಗ ಇಬ್ಬರ ಬಗ್ಗೆ ವದಂತಿಗಳು ಶುರುವಾಗಿದ್ದವು. ಇಬ್ಬರು ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಸಂದರ್ಶನವೊಂದರಲ್ಲಿ ಮೃಣಾಲ್, ಧನುಷ್ ಜೊತೆಗಿನ ಸಂಬಂಧದ ಸುದ್ದಿಗಳನ್ನ ತಮಾಷೆಯ ವದಂತಿ ಎಂದಿದ್ದರು. ಧನುಷ್ ನನ್ನ ಒಳ್ಳೆಯ ಸ್ನೇಹಿತ ಎಂದಿದ್ದರು.

MUST WATCH: ಕೆಂಕೆರೆಯಲ್ಲಿ ಮಂಜುನಾಥ್ MUR*DER CASE – 48 ಗಂಟೆಯಲ್ಲೇ ಹಂತಕರು ಅಂದರ್




