ಕರ್ತವ್ಯ ನಿರ್ವಹಿಸುತ್ತಿದ್ದ Mandya ಮೂಲದ BSF ಯೋಧ ಎಂ.ಬಿ. ಮಾದೇಗೌಡ (44) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Mandya ದ ಯೋಧ BSF ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮಾದೇಗೌಡರು ಮಂಡ್ಯ ನಗರದ ತಾವರೆಗೆರೆ ಬಡಾವಣೆಯ ನಿವಾಸಿ. 2000 ರಲ್ಲಿ ಮೈಸೂರಿನಲ್ಲಿ BSF ಸೇನಾ ನೇಮಕಾತಿ ಮೂಲಕ ಆಯ್ಕೆಯಾಗಿದ್ದು, ಕಳೆದ 25 ವರ್ಷಗಳಲ್ಲಿ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು. ಅವರು ಕರ್ತವ್ಯದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾದರು.
ಇಂದು ಯೋಧನ ಮೃತದೇಹ ಮಂಡ್ಯಕ್ಕೆ ಆಗಮಿಸಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನು ಓದಿ : SSLC, PUC ಪ್ರಶ್ನೆ ಪತ್ರಿಕೆ ಲೀಕ್ಗೆ ಟ್ವಿಸ್ಟ್ – ಆಪ್ತ ವಿದ್ಯಾರ್ಥಿಳಿಗೆ ಶಿಕ್ಷಕರಿಂದ್ಲೇ ಲೀಕ್
ಗೌರವ ಸಲ್ಲಿಕೆ
ಅಂತ್ಯಕ್ರಿಯೆ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಅಧಿಕಾರಿಗಳು ಸೇರಿದಂತೆ:
- ಶಾಸಕ ಗಣಿಗ ರವಿಕುಮಾರ್
- ಡಿಸಿ ಡಾ.ಕುಮಾರ
- ಎಸ್ಪಿ ಶೋಭಾರಾಣಿ
ಮೃತದೇಹಕ್ಕೆ ಗೌರವ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಇಂದು ಮಧ್ಯಾಹ್ನದ ನಂತರ ನಡೆಯಲಿದೆ.
ಇದನ್ನು ನೋಡಿ : ಶಿರಾದಲ್ಲಿ ಮದ್ಯವರ್ಜನ ಶಿಬಿರ ಮದ್ಯಾಸುರನನ್ನು ದಹಿಸಿ ಸಂತಸ




