
ಇಂದು ಶರನ್ನವರಾತ್ರಿಯ ಎರಡನೇ ದಿನ. ಈ ದಿನ ದುರ್ಗಾ ದೇವಿಯ ದ್ವಿತೀಯ ರೂಪವಾದ ಬ್ರಹ್ಮಚಾರಿಣಿ ದೇವಿಯ ಪೂಜೆಯನ್ನು ನೆರವೇರಿಸಲಾಗುತ್ತದ.
👑 ದೇವಿಯ ಸ್ವರೂಪ:
ಬಿಳಿ ವಸ್ತ್ರವನ್ನು ಧರಿಸಿರುವ ಬ್ರಹ್ಮಚಾರಿಣಿ ದೇವಿಯು ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲ ಹಿಡಿದಿರುವಂತೆ ಚಿತ್ರಿಸಲಾಗುತ್ತದೆ. ತಾಯಿ ಬ್ರಹ್ಮಚಾರಿಣಿಯು ಜ್ಞಾನ ಮತ್ತು ತಪಸ್ಸಿನ ದೇವತೆ. ಆಕೆಯ ಆರಾಧನೆಯಿಂದ ಮಂಗಳ ದೋಷ ನಿವಾರಣೆಯಾಗುತ್ತದೆ, ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆ ದೊರೆಯುತ್ತದೆ.
📿 ಪೂಜೆ ಮಹತ್ವ:
ಬ್ರಹ್ಮಚಾರಿಣಿ ದೇವಿಯ ಆರಾಧನೆ ಮಾಡಿದರೆ –
- ಕಾಯಿಲೆಗಳು ಮತ್ತು ರೋಗಗಳಿಂದ ಮುಕ್ತಿ ಸಿಗುತ್ತದೆ.
- ಸೋಮಾರಿತನ, ಅಹಂಕಾರ, ದುರಾಸೆ, ಸುಳ್ಳು, ಸ್ವಾರ್ಥ, ಅಸೂಯೆ ಮುಂತಾದ ದುರ್ಗುಣಗಳು ದೂರವಾಗುತ್ತವೆ.
- ಶಿವನು ಸಂತೋಷಪಡುವನೆಂಬ ನಂಬಿಕೆ ಇದೆ.
🕘 ಪೂಜೆ ಮುಹೂರ್ತಗಳು (ಸೆಪ್ಟೆಂಬರ್ 23, 2025)
- ಬ್ರಹ್ಮ ಮುಹೂರ್ತ: ಬೆಳಿಗ್ಗೆ 4:35 – 5:22
- ಅಭಿಜಿತ್ ಮುಹೂರ್ತ: ಬೆಳಿಗ್ಗೆ 11:49 – ಮಧ್ಯಾಹ್ನ 12:37
- ವಿಜಯ ಮುಹೂರ್ತ: ಮಧ್ಯಾಹ್ನ 2:14 – 3:03
- ಗೋಧೂಳಿ ಮುಹೂರ್ತ: ಸಂಜೆ 6:16 – 6:40
- ಅಮೃತ ಕಾಲ: ಬೆಳಿಗ್ಗೆ 7:06 – 8:51
🍚 ನೈವೇದ್ಯ:
ಬ್ರಹ್ಮಚಾರಿಣಿ ದೇವಿಗೆ ಬರ್ಫಿ, ಸಕ್ಕರೆ, ಪಾಯಸ, ಪಂಚಾಮೃತವನ್ನು ಅರ್ಪಿಸಬಹುದು. ಕೆಂಪು ಬಟ್ಟೆಯನ್ನು ಧರಿಸುವುದು ಮತ್ತು ಬಿಳಿ ಹೂವನ್ನು ಅರ್ಪಿಸುವುದು ಶುಭಕರ.
🙏 ಪೂಜೆ ವಿಧಾನ:
- ಮುಂಜಾನೆ ಸ್ನಾನ ಮಾಡಿ ಶುದ್ದರಾಗಿ.
- ದೇವಿಯ ವಿಗ್ರಹದ ಮುಂದೆ ತುಪ್ಪದ ದೀಪ ಹಚ್ಚಿ.
- ಸುಮಂಗಲಿಯ ವಸ್ತುಗಳು, ಬಿಳಿ ಮಲ್ಲಿಗೆ ಮತ್ತು ದಾಸವಾಳ ಹೂಗಳನ್ನು ಅರ್ಪಿಸಿ.
- ದೇವಿಗೆ ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಿ.
- ದುರ್ಗಾ ಸಪ್ತಶತಿ ಪಠಿಸಿ, ಮಂತ್ರಗಳನ್ನು ಜಪಿಸಿ.
- ಸಂಜೆ ಆರತಿ ಮಾಡಿ, ನಂತರ ಉಪವಾಸ ಮುರಿಯಿರಿ.
🕉️ ಮಂತ್ರಗಳು:
- ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
- ಯಾ ದೇವಿ ಸರ್ವಭೂತೇಷು ಮಾಂ ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ ।
ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋ ನಮಃ ॥ - ಹ್ರೀಂ ಶ್ರೀ ಅಂಬಿಕಾಯೈ ನಮಃ
- ಓಂ ಐಂ ಹ್ರೀಂ ಕ್ಲೀಂ ಬ್ರಹ್ಮಚಾರಿಣ್ಯೈ ನಮಃ
ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ, ಜೀವನದಲ್ಲಿ ಶಾಂತಿ, ಜ್ಞಾನ ಮತ್ತು ಧನಸಮೃದ್ಧಿ ಹರಿದು ಬರುತ್ತದೆ ಎಂಬುದು ನಂಬಿಕೆ




