Tumakuru : ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಕಾರೆಕುರ್ಚಿ ಗ್ರಾಮದ ತೋಟದ ಮನೆಯಲ್ಲಿ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

Tumakuru : ಇನ್ನು ಮೃತರನ್ನು 66 ವರ್ಷದ ಅಂಬಿಕಾ ಅಲಿಯಾಸ್ ಭ್ರಮಾರಾಂಬಿಕಾ ಎನ್ನಲಾಗಿತ್ತು. ಇಲ್ಲಿ ಮಹಿಳೆಯ ಕಣ್ಣು ಗುಡ್ಡೆ ನಾಪತ್ತೆಯಾಗಿತ್ತು. ಈ ವಿಚಾರವಾಗಿ ಇದು ಕೊಲೆಯೋ ಆತ್ಮಹತ್ಯೆಯೋ ಅನ್ನೊ ಪ್ರಶ್ನೆಗಳು ಎಲ್ಲೆಡೆ ಉದ್ಭವವಾಗಿದ್ದವು.
ಅದಾದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ತುಮಕೂರು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಇಂದು ಆಸ್ಪತ್ರೆಯ ಬಳಿ ಬಂದ ಸಂಬಂಧಿಕರು ಮೃತ ಅಂಬಿಕಾ ಅವರ ಮೃತ ದೇಹವನ್ನು ಕಂಡು ಆಕ್ರಂಧನ ಮುಗಿಲು ಮುಟ್ಟಿತ್ತು.
ಮೊನ್ನೆ ತೋಟದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಂಬಿಕಾ ಅವರ ಮೃತದೇಹ ಪತ್ತೆಯಾಗಿದ್ದು, ಮಹಿಳೆಯ ಒಂದು ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು, ಕಣ್ಣಿನ ಗುಡ್ಡೆಯೇ ನಾಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು..
ಇನ್ನು ಮೃತ ಅಂಬಿಕಾ ಅವರು ತಮ್ಮ ಮಗ ಮನೋಹರ್ ಹಾಗೂ ಸೊಸೆ ಕಾವ್ಯಶ್ರೀ ಅವರೊಂದಿಗೆ ಕಾರೆಕುರ್ಚಿ ಗ್ರಾಮದಲ್ಲಿ ವಾಸವಾಗಿದ್ರು. ಆದ್ರೆ ವಾಸದ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ಕಣ್ಣ ಗುಡ್ಡೆ ನಾಪತ್ತೆ ವಿಚಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಅದ್ರೆ ಅದು ಶವವನ್ನು ಇಳಿಸುವ ವೇಳೆ ಒಳಗಡೆ ಹೋಗಿರುವುದು ಎನ್ನಲಾಗಿದೆ.

ಇಂದು ವೃದ್ಧೆ ಅಂಬಿಕಾ ಅವರ ಸಂಬಂಧಿಕರು ಆಸ್ಪತ್ರೆಯ ಬಳಿ ಬಂದು ಕಣ್ಣೀರಿಟ್ಟರು. ಈ ವೇಳೆ ಸಂಬಂಧಿಕರೊಬ್ಬರು ಮಾತನಾಡಿ, ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ಯಾವು ನಡೆದಿಲ್ಲ. ಆದ್ರೆ ಅತ್ತೆ ಸೊಸೆ ನಡುವೆ ಅಗಾಗ ಗಲಾಟೆ ಆಗುತ್ತಿದ್ದದ್ದು ಸಹಜ.
ಮನೆಯವರ ನಡುವೆ ಜಗಳವನ್ನು ಕೂತು ತೀರ್ಮಾನಿಸಿದ್ದೇವು. ಅದಾದ ಬಳಿಕ ಇಂತಹ ಘಟನೆ ನಡೆದಿದೆ. ಇನ್ನು ಕಣ್ಣು ಗುಡ್ಡೆ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಒಳಗಡೆ ಹೋಗಿರಬಹುದು. ಇನ್ನು ವೃದ್ಧೆ ಅಂಬಿಕಾ ತೋಟದ ಮನೆಯಿಂದ ಈಚೆ ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದರು.
ಒಟ್ಟಿನಲ್ಲಿ ವೃದ್ಧೆ ಅಂಬಿಕಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದು ಸತ್ಯವೋ… ಸುಳ್ಳೋ ಅನ್ನೋ ಪ್ರಶ್ನೆಗಳು ಮೂಡತ್ತಿವೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.




