Chitradurga : ಮದುವೆ ವಿಚಾರಕ್ಕೆ ಸಂಬಂಧಿಸಿದ ಕೋಪವು ಭೀಕರ ಅಪರಾಧಕ್ಕೆ ತಿರುಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ನಡೆದಿದೆ.

Chitradurga : ಮದುವೆ ಮಾಡಿಸಿಲ್ಲ ಎಂಬ ಕಾರಣಕ್ಕೆ, ಪುತ್ರನೊಬ್ಬ ತನ್ನ ತಂದೆಯನ್ನೇ ರಾಡ್ನಿಂದ ಹೊಡೆದು ಕೊಲೆ ಮಾಡಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮೃತ ವ್ಯಕ್ತಿಯನ್ನು ಸಣ್ಣನಿಂಗಪ್ಪ ಎಂದು ಗುರುತಿಸಲಾಗಿದ್ದು,ಆರೋಪಿ ಅವರ ಎರಡನೇ ಪುತ್ರ ನಿಂಗರಾಜ ಆಗಿದ್ದಾನೆ.ಈ ಘಟನೆ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿಂಗರಾಜನಿಗೆ ಮದುವೆಯಾಗಿಲ್ಲ ಎಂಬ ವಿಚಾರಕ್ಕೆ ತಂದೆ ಸಣ್ಣನಿಂಗಪ್ಪ ಜೊತೆಗೆ ನಿತ್ಯ ಜಗಳ ನಡೆಯುತ್ತಿತ್ತು.
ಕುಟುಂಬಸ್ಥರು ಎಷ್ಟೇ ಬುದ್ದಿವಾದ ಹೇಳಿದರೂ, ನಿಂಗರಾಜನ ಕೋಪ ಮತ್ತು ಅಸಮಾಧಾನ ಕಡಿಮೆಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ವೃದ್ಧೆ ಮಹಿಳೆಯ ಶವ ಪತ್ತೆ
ಮಲಗಿದ್ದ ವೇಳೆ ತಂದೆಗೆ ರಾಡ್ನಿಂದ ಹಲ್ಲೆ
ಘಟನೆಯ ದಿನ, ಹಿರಿಯ ಪುತ್ರ ಮಾರುತಿಯನ್ನು ಮನೆಗೆ ಕರೆಸಿ ಬುದ್ದಿ ಹೇಳಿಸಲಾಗಿತ್ತು. ಆಗ ತಾತ್ಕಾಲಿಕವಾಗಿ ಸುಮ್ಮನಾಗಿದ್ದ ನಿಂಗರಾಜ,
ರಾತ್ರಿ ಮಲಗಿದ್ದ ತಂದೆಯ ತಲೆಗೆ ರಾಡ್ನಿಂದ ಬಲವಾಗಿ ಹೊಡೆದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಸಣ್ಣನಿಂಗಪ್ಪನನ್ನು ತಕ್ಷಣ ಹೊಸದುರ್ಗ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ, ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು
ತಂದೆಯ ಸಾವಿನ ಬಳಿಕ, ಹಿರಿಯ ಪುತ್ರ ಮಾರುತಿ ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು,
ಪಿಎಸ್ಐ ಮಹೇಶ್ ಕುಮಾರ್ ಎಸ್ ಹಾಗೂ ಕ್ರೈಂ ಪಿಸಿ ರಮೇಶ್ ಅವರು ಆರೋಪಿ ನಿಂಗರಾಜನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಸಿಎಂ ದಾಖಲೆಗೆ ಸಂಭ್ರಮವೋ..ಸಂಭ್ರಮ – ಸಬ್ಬೇನಹಳ್ಳಿಯಲ್ಲಿ ಬಿರಿಯಾನಿ ವಿತರಣೆ




