ಪುರುಷರನ್ನು ಜೈಲಿಗೆ ಹಾಕಿ ಎಂದ ನಟಿ Ramya!

ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ನಟಿ ಹಾಗೂ ರಾಜಕಾರಣಿ ರಮ್ಯಾ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಪ್ರಶ್ನೆ ಎತ್ತಿದ್ದಾರೆ.
ನಾಯಿ ಮನಸ್ಥಿತಿ ಅರ್ಥ ಮಾಡಿಕೊಳ್ಳಲಾಗಲ್ಲ ಎಂದ ಸುಪ್ರೀಂಕೋರ್ಟ್
ಇತ್ತೀಚೆಗೆ ಸುಪ್ರೀಂಕೋರ್ಟ್ನಲ್ಲಿ ಬೀದಿನಾಯಿಗಳ ಸಮಸ್ಯೆ ಕುರಿತು ವಿಚಾರಣೆ ನಡೆದಿತ್ತು. ಈ ವೇಳೆ, “ಬೀದಿನಾಯಿಗಳ ಮನಸ್ಥಿತಿ ಯಾವಾಗ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವು ಯಾವಾಗ ಕಚ್ಚುತ್ತವೆ, ಯಾವಾಗ ಕಚ್ಚುವುದಿಲ್ಲ ಎನ್ನುವುದು ಯಾರಿಗೂ ಗೊತ್ತಿಲ್ಲ” ಎಂದು ಹೇಳಲಾಗಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಇದನ್ನು ಓದಿ : ಇಂಜಿನಿಯರಿಂಗ್ ವಿದ್ಯಾರ್ಥಿ 16 ನೇ ಮಹಡಿಯಿಂದ ಜಿಗಿದು Suicide !
ಪುರುಷರನ್ನು ಜೈಲಿಗೆ ಹಾಕಲಾಗುತ್ತಾ?
ಈ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ನಟಿ ರಮ್ಯಾ, ಅದನ್ನು ಪುರುಷರ ನಡೆಗೆ ಹೋಲಿಕೆ ಮಾಡಿ ಪ್ರಶ್ನಿಸಿದ್ದಾರೆ. ಪುರುಷನ ಮನಸ್ಸು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪುರುಷನು ಯಾವಾಗ ಅತ್ಯಾಚಾರ ಮಾಡ್ತಾನೋ? ಯಾವಾಗ ಕೊಲೆ ಮಾಡ್ತಾನೋ ಗೊತ್ತಿಲ್ಲ.
ಹಾಗಾಗಿ, ಎಲ್ಲ ಪುರುಷರನ್ನೂ ಜೈಲಿಗೆ ಹಾಕಲಾಗುತ್ತಾ? ಎಂದು ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ಮಾಡಿ ಪ್ರಶ್ನಿಸಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಟೀಕಿಸಿದ್ದಾರೆ.

ಇದನ್ನು ನೋಡಿ : BIG NEWS|ಬೆಂಗಳೂರಲ್ಲಿ ಅನೈತಿಕ ಸಂಬಂಧ ಶಂಕೆ : ಪುತ್ರಿಗೆ ನೇಣು ಬಿಗಿದು, ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ!




