Samantha : ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ.

Samantha ನಟನೆಯ ಹೊಸ ಸಿನಿಮಾ ‘ಮಾ ಇಂಟಿ ಬಂಗಾರಂ’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
2 ವರ್ಷಗಳ ಬ್ರೇಕ್ ನಂತರ ಸಮಂತಾ ಗ್ರ್ಯಾಂಡ್ ಕಮ್ಬ್ಯಾಕ್
ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ವಿವಾಹವಾದ ಸಮಂತಾ, ಮದುವೆಯ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸುಮಾರು ಎರಡು ವರ್ಷಗಳ ಗ್ಯಾಪ್ ಬಳಿಕ ಅವರು ‘ಮಾ ಇಂಟಿ ಬಂಗಾರಂ’ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್ ಹೇಗಿದೆ?
ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಹಂಚಿಕೊಂಡಿರುವ ಫಸ್ಟ್ ಲುಕ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ.
ಸೀರೆಯಲ್ಲಿ ಕಾಣಿಸಿಕೊಂಡಿರುವ ಸಮಂತಾ ಗ್ಲಾಮರ್ ಪಾತ್ರವಲ್ಲ, ರಫ್ & ಟಫ್ ಅವತಾರದಲ್ಲಿ ದುರ್ಗೆಯಂತೆ ಶಕ್ತಿಶಾಲಿ ಪೋಸ್ಈ ಪೋಸ್ಟರ್ ನೋಡಿದರೆ, ಇದು ಸಂಪೂರ್ಣವಾಗಿ ಮಾಸ್ ಪಾತ್ರ ಎನ್ನುವುದು ಸ್ಪಷ್ಟವಾಗುತ್ತದೆ.

ನಟಿ ಮಾತ್ರವಲ್ಲ, ನಿರ್ಮಾಪಕಿಯೂ ಹೌದು
ಈ ಸಿನಿಮಾದಲ್ಲಿ ಸಮಂತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಜೊತೆಗೆ ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆಅದರ ಕಾರಣದಿಂದಲೇ ‘ಮಾ ಇಂಟಿ ಬಂಗಾರಂ’ ಸಿನಿಮಾ ಸಮಂತಾ ಅವರಿಗೆ ವಿಶೇಷವಾಗಿದೆ.
ಫಸ್ಟ್ ಲುಕ್ ಬಿಡುಗಡೆಯಾದ ತಕ್ಷಣವೇ “ಲೇಡಿ ಬಾಸ್ ಮರಳಿ ಬಂದಿದ್ದಾರೆ” “ಸಮಂತಾ ಕಮ್ಬ್ಯಾಕ್ ಮಾಸ್ ಆಗಿದೆ” ಎಂಬ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬರುತ್ತಿವೆ. ಫ್ಯಾನ್ಸ್ ಪುಟಗಳಲ್ಲಿ ಈ ಪೋಸ್ಟರ್ ಭಾರೀ ವೈರಲ್ ಆಗಿದೆ.

ಈ ಸಿನಿಮಾವನ್ನು ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಈ ಸಿನಿಮಾ ಮೇಲೆ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ.
ಜನವರಿ 9ಕ್ಕೆ ಟೀಸರ್ ಬಿಡುಗಡೆ
ಫಸ್ಟ್ ಲುಕ್ ಜೊತೆಗೆ ಇನ್ನೊಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ ಜನವರಿ 9ರಂದು ಬೆಳಗ್ಗೆ 10 ಗಂಟೆಗೆ ಟೀಸರ್ ಬಿಡುಗಡೆ ಸಿನಿಮಾದ ರಿಲೀಸ್ ಡೇಟ್ ಇನ್ನೂ ಪ್ರಕಟವಾಗಿಲ್ಲ.ಇದು ಸಮಂತಾ ಅವರ ಮದುವೆ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ . ಜೊತೆಗೆ 2ನೇ ಮದುವೆಯ ನಂತರದ ಮೊದಲ ಪ್ರಾಜೆಕ್ಟ್ ಎನ್ನುವುದು ಮತ್ತೊಂದು ವಿಶೇಷ




