BBK S12 : Bigg Boss Kannada ಮನೆಯಲ್ಲಿ ಸ್ಪರ್ಧಿಗಳ ನಡುವಿನ ವೈಮನಸ್ಸು ದಿನೇದಿನೇ ಹೆಚ್ಚಾಗುತ್ತಿದೆ. ಇತ್ತೀಚಿನ ಎಪಿಸೋಡ್ನಲ್ಲಿ ರಾಶಿಕಾ ಶೆಟ್ಟಿ ಹಾಗೂ ಗಿಲ್ಲಿ ನಟ ನಡುವಿನ ವಾಗ್ವಾದ ಮನೆಮಂದಿಯ ಗಮನ ಸೆಳೆದಿದೆ.

BBK S12 : ಟಾಸ್ಕ್ ಸೋಲಿನ ವಿಚಾರವಾಗಿ ರಾಶಿಕಾ, ಗಿಲ್ಲಿಯನ್ನು ನೇರವಾಗಿ ಹೀಯಾಳಿಸಿದ್ದಾರೆ.
ರಾಶಿಕಾ ಶೆಟ್ಟಿ (Rashika Shetty) ಹಾಗೂ ಗಿಲ್ಲಿ ನಟ ನಡುವೆ ಮೊದಲಿನಿಂದಲೂ ಸ್ನೇಹಪೂರ್ಣ ಬಾಂಧವ್ಯವಿಲ್ಲ. ಇಡೀ ಸೀಸನ್ಲ್ಲೇ ಕೆಲವೇ ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಪರಸ್ಪರ ಬೆಂಬಲಿಸಿದ ಸಂದರ್ಭಗಳು ಕೂಡ ವಿರಳವಾಗಿವೆ. ಹೀಗಾಗಿ, ಇವರ ಮಧ್ಯೆ ಆಗಾಗ ವೈಮನಸ್ಸು ತಲೆದೋರುತ್ತಲೇ ಬಂದಿದೆ.
ಟಾಸ್ಕ್ನಲ್ಲಿ ಗಿಲ್ಲಿಯ ಸೋಲು
ಇತ್ತೀಚೆಗೆ ನಡೆದ ಟಾಸ್ಕ್ನಲ್ಲಿ ಗಿಲ್ಲಿ ನಟ ಮತ್ತು ಧ್ರುವಂತ್ ಮುಖಾಮುಖಿಯಾಗಿದ್ದರು. ಇದು ಬಾಲ್ ಎಸೆಯುವ ಟಾಸ್ಕ್ ಆಗಿದ್ದು, ಗಿಲ್ಲಿ ನಿಧಾನಗತಿ ತೋರಿದರು. ಟಾಸ್ಕ್ನಲ್ಲಿ ಬೇಕಾದ ವೇಗ ತೋರಿಸಲು ವಿಫಲವಾದ ಕಾರಣ ಗಿಲ್ಲಿ ಸೋಲನುಭವಿಸಿದರು.
ಈ ಸೋಲನ್ನೇ ಆಧಾರ ಮಾಡಿಕೊಂಡು ರಾಶಿಕಾ ಅವರು ಗಿಲ್ಲಿಯನ್ನು ಟಾಂಟ್ ಮಾಡಿದ್ದಾರೆ.
ಇದನ್ನು ಓದಿ : ಗುರುತು ಸಿಗದಂತೆ ಸುಟ್ಟು ಕರಕಲಾದ Car – ಇಬ್ಬರು ಸಜೀವ ದಹನ

‘ಟಾಸ್ಕ್ ಆಡೋಕೆ ಬರಲ್ಲ ನಿಂಗೆ’ – ರಾಶಿಕಾ ಕಿಡಿ
ಟಾಸ್ಕ್ ಸೋತು ಸಾಕಷ್ಟು ಸಮಯ ಕಳೆದ ನಂತರ, ರಾಶಿಕಾ ಹಾಗೂ ರಕ್ಷಿತಾ ನಡುವೆ ಜಗಳ ಆರಂಭವಾಯಿತು. ಇಬ್ಬರೂ ರಘು ಜೊತೆ ಒಂದೇ ತಂಡದಲ್ಲಿ ಆಡುವ ವಿಚಾರವಾಗಿ ವಾಗ್ವಾದ ಉಂಟಾಯಿತು.
ಈ ಜಗಳದ ಮಧ್ಯೆ ರಕ್ಷಿತಾ ಪರವಾಗಿ ಗಿಲ್ಲಿ ಮಧ್ಯ ಪ್ರವೇಶಿಸಿದರು.ಇದರಿಂದ ಕೋಪಗೊಂಡ ರಾಶಿಕಾ, ಗಿಲ್ಲಿಯ ಟಾಸ್ಕ್ ಸೋಲನ್ನು ಎತ್ತಿ ಹಿಡಿದು,
‘ನಿಂಗೆ ಒಂದೂ ಟಾಸ್ಕ್ ಆಡೋಕೆ ಬರಲ್ಲ’ ಎಂದು ನೇರವಾಗಿ ಹೇಳಿದರು.

ಗಿಲ್ಲಿಯ ಪ್ರತಿಕ್ರಿಯೆ ಏನು?
ರಾಶಿಕಾರ ಟಾಂಟ್ಗೆ ಗಿಲ್ಲಿ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣಿಸಲಿಲ್ಲ. ಬದಲಾಗಿ,
‘ಈ ಬಾರಿ ಗೆದ್ದು ತೋರಿಸು’ ಎಂದು ರಾಶಿಕಾಗೆ ಸವಾಲು ಹಾಕಿದ್ದಾರೆ. ಇದರಿಂದ ಇಬ್ಬರ ನಡುವಿನ ವಾಗ್ವಾದ ಇನ್ನಷ್ಟು ತೀವ್ರಗೊಂಡಿತು.

ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ ನಡುವಿನ ಈ ಮಾತಿನ ಚಕಮಕಿ ಮುಂದಿನ ದಿನಗಳಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಮುಂದಿನ ಟಾಸ್ಕ್ಗಳಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇದನ್ನು ನೋಡಿ : CM ಯಾರಿಗೂ ಮನೆ ಕೊಟ್ಟಿಲ್ಲ – SIDDU ವಿರುದ್ಧ ಎಂ.ಟಿ.ಕೆ.ಆಕ್ರೋಶ




