ಶಾಸಕರ ಇನ್ಸ್ಟಾಗ್ರಾಮ್ನಿಂದ ಯುವತಿಗೆ ಮೆಸೇಜ್: ಖಾತೆ ಹ್ಯಾಕ್ ಆಗಿರುವ ದೂರು ದಾಖಲಿಸಿದ C.K Ramamurthy!

ಜಯನಗರ ಕ್ಷೇತ್ರದ ಬಿಜೆಪಿ ಶಾಸಕರಾದ ಸಿ.ಕೆ.ರಾಮಮೂರ್ತಿ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಯುವತಿ ಅನುಷ್ಕಾ ನಾಗಮೋಹನ್ ಅವರಿಗೆ “Good Morning”, “Good Evening” ಸಂದೇಶಗಳು ಬಂದಿವೆ.
ಟ್ವಿಟರ್ನಲ್ಲಿ ಕಿಡಿ
ಇನ್ನು ಅನುಷ್ಕಾ ನಾಗಮೋಹನ್ ಈ ಸಂದೇಶಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಕಿಡಿಕಾರಿದ್ದಾರೆ. ಈ ಸಂದೇಶಗಳು ವೈರಲ್ ಆದ ನಂತರ ಸಾರ್ವಜನಿಕರಲ್ಲಿ ಬೇಸರ ವ್ಯಕ್ತವಾಗಿದೆ.
ಇದನ್ನು ಓದಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ

ಮೇಸೇಜ್ ನಲ್ಲಿ ಕೆಲವೊಂದು ಅಶ್ಲೀಲ ಅಂಶ
ಇದರ ವಿರುದ್ಧ ಅನುಷ್ಕಾ ನಾಗಮೋಹನ್ ಕಿಡಿಕಾರಿದ್ದಾರೆ. ಮೇಸೇಜ್ ನಲ್ಲಿ ಕೆಲವೊಂದು ಅಶ್ಲೀಲ ಅಂಶ ಕೂಡ ಇದೆ. ಈ ಬಗ್ಗೆ ಅನುಷ್ಕಾ ನಾಗಮೋಹನ್, ಸಿ.ಕೆ.ರಾಮಮೂರ್ತಿ ಅವರ ಇನ್ಸಾಟಾಗ್ರಾಮ್ ಮೇಸೇಜ್ ಅನ್ನು ಟ್ವೀಟರ್ ನಲ್ಲಿ ಟ್ವೀಟ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಸೈಬರ್ ಪೊಲೀಸ್ ಠಾಣೆಗೆ ದೂರು
ಆದರೇ, ತಮ್ಮ ಮೊಬೈಲ್ ಹ್ಯಾಕ್ ಆಗಿದೆ. ಮೊಬೈಲ್ ಹ್ಯಾಕ್ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ಶಾಸಕ C.K Ramamurthy ಸ್ಪಷ್ಟನೆ ನೀಡಿದ್ದಾರೆ.

ಇದನ್ನು ನೋಡಿ : ಮರಕ್ಕೆ ಡಿಕ್ಕಿ ಹೊಡೆದಕಾರು ಸ್ಥಳದಲ್ಲೇ ಇಬ್ಬರ ಸಜೀವ ದಹನ




