Chikkamagaluru : ಹಣದಾಸೆಯಿಂದ ತಂದೆಯೊಬ್ಬ ಅಪ್ರಾಪ್ತ ಹೆಣ್ಣುಮಗುವನ್ನೇ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದ್ದು, ಮಾನವೀಯತೆಗೇ ಸವಾಲು ಎಸೆದಂತಾಗಿದೆ.

Chikkamagaluru : ಸಂತ್ರಸ್ತ ಅಪ್ರಾಪ್ತ ಬಾಲಕಿ ತಾಯಿಯನ್ನು ಕಳೆದುಕೊಂಡ ಬಳಿಕ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಪಿಯುಸಿ ವರೆಗೆ ವಿದ್ಯಾಭ್ಯಾಸ ಮುಗಿಸಿದ್ದಳು.
ಬಳಿಕ ತಂದೆಯ ಮನೆಗೆ ಮರಳಿದ್ದ ಆಕೆ, ಡಿಸೆಂಬರ್ ತಿಂಗಳಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ತೆರಳಿ ಎರಡು ದಿನ ಉಳಿದು ಬಂದಿದ್ದಳು.
ಮತ್ತೊಮ್ಮೆ ಅಜ್ಜಿ ಕರೆ ಮಾಡಿದ್ದಾಳೆ ಎಂದು ಹೇಳಿ ಬಾಲಕಿಯನ್ನು ಅಜ್ಜಿಯ ಮನೆಗೆ ಕರೆತಂದಿರುವ ತಂದೆ, ಹಣಕ್ಕಾಗಿ ಮಗಳನ್ನು ದಂಧೆಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ.
ದಿನಕ್ಕೆ ಐದು ಸಾವಿರ ರೂಪಾಯಿ ಸಿಗುತ್ತದೆ ಎಂಬ ಆಸೆಗೆ ತಂದೆ ಈ ಅಮಾನುಷ ಕೃತ್ಯಕ್ಕೆ ಮುಂದಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಸಂದರ್ಭ ಅಜ್ಜಿಯ ಮನೆಗೆ ಆಗಮಿಸಿದ್ದ ಭರತ್ ಶೆಟ್ಟಿ ಎಂಬಾತ ತಂದೆ–ಮಗಳೊಂದಿಗೆ ಸಲುಗೆ ಬೆಳೆಸಿದ್ದಾನೆ.
ಆತನ ಮನೆಗೆ ಬಂದು ತಂಗುವಂತೆ ಸೂಚಿಸಿದ್ದ ಭರತ್, ನಂತರ ಅವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ.
ಇದನ್ನು ಓದಿ : ಪುರೋಹಿತನನ್ನು ಮದುವೆಯಾಗಲು ಒಪ್ಪದ ಯುವತಿ – ಯುವಕ Suicide

ಎರಡು ದಿನಗಳ ಕಾಲ ನಾಲ್ವರಿಂದ ಲೈಂಗಿಕ ದೌರ್ಜನ್ಯ
ಮಂಗಳೂರಿನಲ್ಲಿ ಬಾಲಕಿ ತಾನು ಮುಟ್ಟಾಗಿರುವುದಾಗಿ ತಂದೆಗೆ ತಿಳಿಸಿದ್ದರೂ, ಮರುದಿನ ಭರತ್ ಶೆಟ್ಟಿ 4–5 ಜನ ಬರುತ್ತಾರೆ ಎಂದು ಹೇಳಿ ಆಕೆಯನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.
20 ರಿಂದ 45 ವರ್ಷದ ನಾಲ್ವರು ಪುರುಷರು ಒಬ್ಬರ ನಂತರ ಒಬ್ಬರಂತೆ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ.
ಮರುದಿನವೂ ಇದೇ ಕೃತ್ಯ ಮರುಕಳಿಸಿದ್ದು, ಬಾಲಕಿ ನಿರಾಕರಿಸಿದರೂ ಬಲವಂತವಾಗಿ ಅತ್ಯಾಚಾರ ನಡೆಸಲಾಗಿದೆ.
ನಾನು ಅಪ್ರಾಪ್ತೆ ಎಂದು ಬಾಲಕಿ ಎಷ್ಟೇ ಅಂಗಲಾಚಿದರೂ, “ನಾವು ಹಣ ಕೊಟ್ಟಿದ್ದೇವೆ” ಎಂದು ಹೇಳಿ ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.
12 ಮಂದಿ ಬಂಧನ, ಇನ್ನಷ್ಟು ಆರೋಪಿಗಳ ಹುಡುಕಾಟ
ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಂದೆ, ಅಜ್ಜಿ ಹಾಗೂ ಮಂಗಳೂರು ಮೂಲದ ಕಿಂಗ್ಪಿನ್ ಭರತ್ ಶೆಟ್ಟಿ ಸೇರಿ ಒಟ್ಟು 12 ಮಂದಿಯನ್ನು ಬಂಧಿಸಿದ್ದಾರೆ.
ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : TUMAKURU | ದಯಾಮರಣ ಕೋರಿ ಡಿಸಿ ಕಚೇರಿ ಎದುರು ಕುಟುಂಬಸ್ಥರ ಕಣ್ಣೀರು..!?




