Tumakuru : ಇಬ್ಬರು ಮಕ್ಕಳೊಂದಿಗೆ ಸಂಪಿಗೆ ಬಿದ್ದು ತಾಯಿ ಆತ್ಮಹತ್ಯೆ ,ಡೆತ್ ನೋಟ್ ಬರೆದಿಟ್ಟು ಪುಟ್ಟ ಮಕ್ಕಳೊಂದಿಗೆ ಸೂಸೈಡ್..!

Tumakuru : ಎರಡು ಮಕ್ಕಳೊಂದಿಗೆ ಸಂಪಿಗೆ ಬಿದ್ದು ತಾಯಿಯೊಬ್ಬಳು ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಸಿಂಗನಹಳ್ಳಿಯಲ್ಲಿ ನಡೆದಿದ್ದು, ಮೃತರನ್ನು 26 ವರ್ಷದ ವಿಜಯಲಕ್ಷ್ಮೀ, 5 ವರ್ಷದ ಚೇತನ್ ಹಾಗೂ 5 ವರ್ಷದ ಚೈತನ್ಯ ಎನ್ನಲಾಗಿದೆ.
ತಾಯಿ ವಿಜಯಲಕ್ಷ್ಮೀ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಈ ಡೆತ್ ನೋಟ್ ನಲ್ಲಿ ನಮ್ಮ ಸಾವಿಗೆ ನಾವೇ ಕಾರಣ ಎಂದು ಬರೆದಿಟ್ಟಿದ್ದಾರೆ.

ಇದನ್ನು ಓದಿ : ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ
ಜೀವನದಲ್ಲಿ ನನಗೆ ಬೇಸರವಾಗಿದೆ. ನನ್ನ ಗಂಡನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕೂಡ ಬರೆದಿಟ್ಟಿದ್ದಾಳೆ. ಆದ್ರೆ ಇವರ ಸಾವು ನಿಜವಾಗಲೂ ಆತ್ಮಹತ್ಯೆ ಅಲ್ಲ ಕೌಟುಂಬಿಕ ಕಲಹಕ್ಕೆ ಬೇಸತ್ತು ಸತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರೊಂದಿಗೆ ತುಮಕೂರು ಎಸ್ ಪಿ ಕೆ.ವಿ.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಆತ್ಮಹತ್ಯೆಯ ಕುರಿತಾಗಿ ಹಲವು ಅನುಮಾನಗಳು ಹುಟ್ಟುಕೊಂಡಿದ್ದು, ಮರಣೊತ್ತರ ಪರೀಕ್ಷೆ ಮತ್ತು ತನಿಖೆಯಿಂದಷ್ಟೆ ಸತ್ಯಾಸತ್ಯತೆ ತಿಳಿಯಬರಲಿದೆ.
ಇದನ್ನು ನೋಡಿ : TUMAKURU | ಅಶ್ಲೀಲ ORCHESTRA ಕರ್ಮಕಾಂಡ – ಮಕ್ಕಳನ್ನ ಟಾರ್ಗೆಟ್ ಮಾಡಿದ್ರೆ ಬೀಳುತ್ತೆ CASE




