ಪೆಟ್ರೋಲ್ ಸುರಿದುಕೊಂಡು Suicide ಗೆ ಯತ್ನಿಸಿದ ಯುವಕ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ತಾಯಿಯಿಂದ ಹಣ ನೀಡಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು Suicide ಗೆ ಯತ್ನಿಸಿದ ಘಟನೆ ಇಂದು ನಡೆದಿದೆ. 34 ವರ್ಷದ ಮಹೇಶ್ ಎಂಬಾತ ಈ ಘಟನೆಗೆ ಕಾರಣನಾಗಿದ್ದಾನೆ.
ಬೆಂಕಿ ಹಚ್ಚಿಕೊಂಡ ಮಗ..!
ಮಹೇಶ್, ತಾಯಿಯಿಂದ ಎರಡು ಲಕ್ಷ ರೂಪಾಯಿ ಪಡೆಯಲು ನಿರಂತರವಾಗಿ ಒತ್ತಾಯಿಸುತ್ತಿದ್ದನು. ಹಣ ತರಲು ತಾಯಿ ಬ್ಯಾಂಕ್ಗೆ ತೆರಳಿದ್ದ ಸಂದರ್ಭದಲ್ಲಿ, ಹಣದ ವಿಳಂಬಕ್ಕೆ ಕೋಪಗೊಂಡ ಮಹೇಶ್ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ.

ಇದನ್ನು ಓದಿ : 40ನೇ ವಯಸ್ಸಿನಲ್ಲಿ 3ನೇ ಮಗುವಿಗೆ ತಂದೆಯಾದ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್
ಜಿಲ್ಲಾಸ್ಪತ್ರೆಗೆ ರವಾನೆ
ಇನ್ನು ಘಟನೆಯನ್ನು ಕಂಡ ಸಾರ್ವಜನಿಕರು ತಕ್ಷಣ ಮಹೇಶ್ ಅನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಗಂಭೀರವಾಗಿ ಸುಟ್ಟ ಗಾಯಗಳ ಹಿನ್ನೆಲೆಯಲ್ಲಿ, ಮಹೇಶ್ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಮಹೇಶ್ ಈಗಾಗಲೇ ತಾಯಿಯಿಂದ ನಾಲ್ಕು ಲಕ್ಷ ರೂಪಾಯಿ ಪಡೆದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ ಎಂಬ ಆರೋಪವೂ ಕೂಡ ಕೇಳಿಬಂದಿದೆ. ಇನ್ನು ಆಸ್ಪತ್ರೆಯ ಆವರಣದಲ್ಲಿ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನು ನೋಡಿ : TUMAKURU | ಶಾಲಾ ಮಕ್ಕಳ ಗಲಾಟೆ ಬಾಲಕನ ಸಾವಿನಲ್ಲಿ ಅಂತ್ಯ?




