ಮಾಜಿ Boy Friend ನ ಅಪಾರ್ಟ್ಮೆಂಟ್ನಲ್ಲಿ ಶವ ಪತ್ತೆಯಾಗಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ.

ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಎಲ್ಲಿಕಾಟ್ ಸಿಟಿಯಲ್ಲಿ ಭಾರತ ಮೂಲದ ಯುವತಿಯೊಬ್ಬರ ಶವವು ಮಾಜಿ Boy Friendನ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ.
ಕೊಲೆಯಾದ ಯುವತಿಯನ್ನು ನಿಕಿತಾ ಗೋಡಿಶಾಲ (27) ಎಂದು ಗುರುತಿಸಲಾಗಿದೆ. ಅವರು ಎಲ್ಲಿಕಾಟ್ ಸಿಟಿಯಲ್ಲಿ ಡೇಟಾ ಅನಾಲಿಸ್ಟ್ (Data Analyst) ಆಗಿ ಕೆಲಸ ಮಾಡುತ್ತಿದ್ದರು ಎಂದು ಹೋವರ್ಡ್ ಕೌಂಟಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಜಿ ಗೆಳೆಯನ ಮೇಲೆ ಕೊಲೆ ಆರೋಪ
ನಿಕಿತಾ ಅವರ ಶವವು ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ (26) ಒಡೆತನದ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶರ್ಮಾ ವಿರುದ್ಧ ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪ ದಾಖಲಿಸಿ, ಪೊಲೀಸರು ಬಂಧನ ವಾರಂಟ್ ಪಡೆದಿದ್ದಾರ
ಅರ್ಜುನ್ ಶರ್ಮಾ ಅವರು ಜನವರಿ 2ರಂದು ನಿಕಿತಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಡಿಸೆಂಬರ್ 31ರಂದು ಮೇರಿಲ್ಯಾಂಡ್ನ ತಮ್ಮ ಅಪಾರ್ಟ್ಮೆಂಟ್ನಲ್ಲಿ ಕೊನೆಯದಾಗಿ ನಿಕಿತಾವನ್ನು ನೋಡಿದ್ದಾಗಿ ತಿಳಿಸಿದ್ದಾರೆ. ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಅಪಾರ್ಟ್ಮೆಂಟ್ನಲ್ಲಿ ಶೋಧ ನಡೆಸಿದಾಗ, ನಿಕಿತಾ ಅವರ ಮೃತದೇಹ ಪತ್ತೆಯಾಗಿದೆ.
ಇದನ್ನು ಓದಿ : ಹೀಲಿಯಂ Gas Cylinder Explosion – ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ಪತ್ತೆಯಾದ ಶವದ ಮೇಲೆ ಗಾಯಗಳಿರುವುದು ಕಂಡುಬಂದಿದ್ದು, ಕೊಲೆ ಶಂಕೆ ಮತ್ತಷ್ಟು ಬಲವಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಡಿಸೆಂಬರ್ 31ರಂದು ಸಂಜೆ 7 ಗಂಟೆಯ ನಂತರ ಅರ್ಜುನ್ ಶರ್ಮಾ ನಿಕಿತಾವನ್ನು ಕೊಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ನಿಕಿತಾ ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ ದಿನವೇ ಅರ್ಜುನ್ ಶರ್ಮಾ ವಿಮಾನದಲ್ಲಿ ಭಾರತಕ್ಕೆ ತೆರಳಿರುವುದು ಬೆಳಕಿಗೆ ಬಂದಿದೆ. ಆತನ ಬಂಧನಕ್ಕಾಗಿ ಫೆಡರಲ್ ಕಾನೂನು ಜಾರಿ ಸಂಸ್ಥೆಗಳ ಸಹಾಯವನ್ನು ಪೊಲೀಸರು ಪಡೆದಿದ್ದಾರೆ.
ನಿಕಿತಾ ಗೋಡಿಶಾಲ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ಪ್ರಕಟಣೆ ಹೊರಡಿಸಿದೆ.
ಇದನ್ನು ನೋಡಿ : DEVARAYANA DURGAದಲ್ಲಿ ಕೋತಿಗಳ ಮಾರಣಹೋಮ..?




