ರಾಜ್ಯದ ದೀರ್ಘಾವಧಿ CM ಆಗಲಿದ್ದಾರೆ ಸಿದ್ದರಾಮಯ್ಯ.

ರಾಜ್ಯದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಅವರು ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದ್ದು, ದೇವರಾಜ ಅರಸು ದಾಖಲೆಯನ್ನು ನಾಳೆ ಮುರಿಯಲಿದ್ದಾರೆ. ದೇವರಾಜ ಅರಸು 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅದೇ ದಿನಾಂಕಕ್ಕೆ ಸಿದ್ದರಾಮಯ್ಯ ಕೂಡ 7 ವರ್ಷ 239 ದಿನ ಸಿಎಂ ಸ್ಥಾನದಲ್ಲಿ ಪೂರ್ಣಗೊಳ್ಳುತ್ತಿದ್ದಾರೆ.
ತೃತೀಯ ಸ್ಥಾನದಲ್ಲಿ ಎಸ್. ನಿಜಲಿಂಗಪ್ಪ
ರಾಜ್ಯದ ಇತಿಹಾಸದಲ್ಲಿ ತೃತೀಯ ಸ್ಥಾನದಲ್ಲಿ ಎಸ್. ನಿಜಲಿಂಗಪ್ಪ (7 ವರ್ಷ 175 ದಿನ), ನಾಲ್ಕನೇ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ (5 ವರ್ಷ 216 ದಿನ), ಹಾಗೂ ಐದನೇ ಸ್ಥಾನದಲ್ಲಿ ಬಿ.ಎಸ್. ಯಡಿಯೂರಪ್ಪ (5 ವರ್ಷ 82 ದಿನ) ಇದ್ದಾರೆ.

ಇದನ್ನು ಓದಿ : IPL ಮ್ಯಾಚ್ ಶಿಫ್ಟ್ ವಿಚಾರ – MCL ಮಹತ್ವದ ಟ್ವೀಟ್..!?
ದೇವರಾಜ ಅರಸ್ ದಾಖಲೆ ನಾಳೆ ಬ್ರೇಕ್ ಮಾಡಲಿದ್ದಾರೆ CM
ದೇವರಾಜ ಅರಸು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿರಲಿಲ್ಲ. 2018ರ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರೂಪಗೊಂಡಿದ್ದು, ಕುಮಾರಸ್ವಾಮಿ ನೇತೃತ್ವದ ಸರ್ಕಾರ 14 ತಿಂಗಳಿಗೇ ಪತನ ಹೊಂದಿತ್ತು. ನಂತರ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕ್ರಮವಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಬಜೆಟ್ ಮಂಡನೆಯಲ್ಲೂ CM ದಾಖಲೆ
ಇನ್ನು ಸಿಎಂ ಸಿದ್ದರಾಮಯ್ಯ ಅವರು 16 ಬಜೆಟ್ ಮಂಡನೆ ಮೂಲಕವೂ ದಾಖಲೆಯು ಬರೆದಿದ್ದಾರೆ. ಇದರಲ್ಲಿ ರಾಮಕೃಷ್ಣ ಹೆಗಡೆ 13 ಬಜೆಟ್ ಮಂಡನೆಗೆ ಎರಡನೇ ಸ್ಥಾನದಲ್ಲಿದ್ದಾರೆ.

ಸಂಭ್ರಮಾಚರಣೆ
CM ಸಿದ್ದರಾಮಯ್ಯನವರ ಈ ವಿಶೇಷ ಸಾಧನೆಗಾಗಿ ಅಭಿಮಾನಿಗಳು ಮತ್ತು ಬೆಂಬಲಿಗರು ಈಗಾಗಲೇ ಸಂಭ್ರಮಾಚರಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಕಾವೇರಿ ನಿವಾಸದ ಎದುರಿನ ಸರ್ಕಲ್ ಬಳಿ ವಿಶೇಷ ಶುಭಾಶಯಗಳ ಬ್ಯಾನರ್ಗಳು ರಾರಾಜಿಸುತ್ತದೆ.
ಇದನ್ನು ನೋಡಿ : ದಕ್ಷಿಣ ಕೊರಿಯಾದ ವ್ಯಕ್ತಿಯನ್ನು ಕೊಂದ ಮಣಿಪುರದ ಮಹಿಳೆ




