Yellapur Murder Case Update : ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರದಲ್ಲಿ ಮದುವೆಗೆ ಒಪ್ಪದ ಮಹಿಳೆಯನ್ನು ಯುವಕನೊಬ್ಬ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾದ ಘಟನೆ ಶನಿವಾರ ನಡೆದಿದೆ.

Yellapur Murder Case Update : ಯಲ್ಲಾಪುರದಲ್ಲಿ ಮದುವೆಗೆ ಒಪ್ಪದ ಮಹಿಳೆಯನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿ ರಫೀಕ್ (30) ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸರ ಶ್ವಾನದಳ ಹಾಗೂ ಹುಡುಕಾಟ ತಂಡದ ಪರಿಶೀಲನೆಯ ವೇಳೆ ಅವನ ಮೃತದೇಹ ಯಲ್ಲಾಪುರದ ಕಾಳಮ್ಮನಗರ ಅರಣ್ಯದಲ್ಲಿ ಪತ್ತೆಯಾಗಿತ್ತು.
ಹತ್ಯೆ ಪ್ರಕರಣದ ಹಿನ್ನೆಲೆ
ಮೃತ ಮಹಿಳೆ ರಂಜಿತಾ, ಸುಮಾರು ಹತ್ತು ವರ್ಷಗಳ ಹಿಂದೆ ಗಂಡಿನಿಂದ ವಿಚ್ಛೇದನ ಪಡೆದಿದ್ದರು. ಅವರಿಗೆ ಒಂದು ಮಗು ಇದ್ದು, ಅವರು ತಮ್ಮ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸಿಸುತ್ತಿದ್ದರು.
ಜೀವನೋಪಾಯಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ರಂಜಿತಾ, ಕೊಲೆಗೊಳಗಾದ ಸಂದರ್ಭದಲ್ಲಿ 30 ವರ್ಷದ ರಫೀಕ್ ಅವರನ್ನು ಪ್ರೀತಿಸುತ್ತಿದ್ದಳು.
MUST READ : Yellapur Murder Case : ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ..!!
ಮದುವೆಗೆ ಒತ್ತಡ
ಇತ್ತೀಚೆಗೆ, ರಫೀಕ್ ಮದುವೆಯಾಗುವಂತೆ ರಂಜಿತಾಳ ಮೇಲೆ ಒತ್ತಾಯ ಮಾಡುತ್ತಿದ್ದ. ಆದರೆ ರಂಜಿತಾ ಸ್ಪಷ್ಟವಾಗಿ ನಿರಾಕರಿಸಿ,“ನಮ್ಮ ಸಂಬಂಧ ಹೀಗೆ ಇರಲಿ, ಆದರೆ ಮದುವೆ ಆಗುವುದಿಲ್ಲ”ಎಂದು ಹೇಳಿದ್ದರು.
ಈ ವೇಳೆ ಕೋಪಗೊಂಡ ರಫೀಕ್, ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ರಂಜಿತಾಳನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಮದುವೆ ಬಗ್ಗೆ ಮತ್ತೆ ಕೇಳಿ, ಆಕೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಪೊಲೀಸ್ ತನಿಖೆಯಲ್ಲಿ ತಿಳಿದುಬಂದಂತೆ, ಆರೋಪಿ ರಫೀಕ್ ಮತ್ತು ರಂಜಿತಾಳ ಅಣ್ಣ ಸ್ನೇಹಿತರಾಗಿದ್ದರು. ಘಟನೆ ಮೊದಲು ರಾತ್ರಿ ಇಬ್ಬರೂ ಪಾರ್ಟಿ ಮಾಡಿದ್ದ ಮಾಹಿತಿ ಹೊರಬಂದಿದೆ.
ಯಲ್ಲಾಪುರ ಬಂದ್
ಹಿಂದೂ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ ವಿಚಾರಕ್ಕೆ ಖಂಡಿಸಿ, ಇಂದು ಯಲ್ಲಾಪುರದಲ್ಲಿ ವಿಹೆಚ್ಪಿ (VHP) ಕರೆ ನೀಡಿ ಬಂದ್ಗಾಗಿ ಮನವಿ ಮಾಡಿತ್ತು.
ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಪ್ರತಿಭಟನೆಗಾಗಿ ಸಿದ್ಧತೆ ನಡೆದಿದ್ದರೂ, ಆರೋಪಿ ಆತ್ಮಹತ್ಯೆ ಮಾಡಿದ ಕಾರಣ ಬಂದ್ ಮತ್ತು ಪ್ರತಿಭಟನೆಗಳು ಮಧ್ಯಂತರವಾಗಿ ಸ್ಥಗಿತಗೊಂಡವು.
ಇದನ್ನು ನೋಡಿ : ಮರಕ್ಕೆ ಕಾರು ಡಿಕ್ಕಿಯಾಗಿ ಆಕ್ಸಿಡೆಂಟ್ – ಕಾರಿನಲ್ಲಿದ್ದ ಶಿಕ್ಷಕ ದಾರುಣ ಸಾ*




