Yash ತಾಯಿ ಪುಷ್ಪಾ ವಿರುದ್ಧ ಒತ್ತುವರಿ ಆರೋಪ; ಕೋರ್ಟ್ ಆದೇಶದಂತೆ ಘರ್ಜಿಸಿದ ಜೆಸಿಬಿ..!

ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ Actor Yash ಅವರ ತಾಯಿ ಪುಷ್ಪಾ (Pushpa) ಅವರಿಗೆ ನ್ಯಾಯಾಲಯದಿಂದ ಆಘಾತ ಎದುರಾಗಿದೆ. ಬೇರೆಯವರ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಕಾಂಪೌಂಡ್ನ್ನು ಕೋರ್ಟ್ ಅನುಮತಿಯ ಮೇರೆಗೆ ಧ್ವಂಸಗೊಳಿಸಲಾಗಿದೆ.
Yash ತಾಯಿ ಪುಷ್ಪಾ ವಿರುದ್ಧ ಒತ್ತುವರಿ ಆರೋಪ
ಹಾಸನ ನಗರದ ವಿದ್ಯಾನಗರ ಪ್ರದೇಶದಲ್ಲಿರುವ ಪುಷ್ಪಾ ಅವರ ನಿವಾಸದ ಬಳಿ ನಿರ್ಮಿಸಲಾಗಿದ್ದ ಕಾಂಪೌಂಡ್ನ್ನು ಮೂಲ ಜಾಗದ ಮಾಲೀಕರು JCB ಮೂಲಕ ಇಂದು ಬೆಳಗಿನ ಜಾವ ನೆಲಸಮಗೊಳಿಸಿದ್ದಾರೆ. ಸುಮಾರು 1,500 ಚದರ ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಜಾಗದ ಮಾಲೀಕ ದೇವರಾಜು ಆರೋಪಿಸಿದ್ದಾರೆ.

ಇದನ್ನು ಓದಿ : Hubballi ಯಲ್ಲಿ ನಡೀತು ಆಘಾತಕಾರಿ ಘಟನೆ – ಆಗಿದ್ದೇನು?
ಅಕ್ರಮ ಕಾಂಪೌಂಡ್ ತೆರವು
ಇನ್ನು ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಅಕ್ರಮವಾಗಿ ಗೋಡೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದ ಅನುಮತಿಯ ಮೇರೆಗೆ ಜಿಪಿಎ ಹೋಲ್ಡರ್ ಮೂಲಕ ಅಕ್ರಮ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಅಕ್ರಮವಾಗಿ ಗೋಡೆ ನಿರ್ಮಿಸಲಾಗಿದೆ ಎಂದು ಆರೋಪ
ಇತ್ತ, ಜಾಗದ ಮಾಲೀಕರು ಅಕ್ರಮವಾಗಿ ಗೋಡೆ ನಿರ್ಮಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರೆ, ಈ ಆರೋಪ ಗಳನ್ನು ನಟ ಯಶ್ ಅವರ ತಾಯಿ ಪುಷ್ಪಾ ಅವರು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ತಮ್ಮ ಪರ ವಾದವನ್ನು ನ್ಯಾಯಾಲಯದ ಮುಂದೆ ಮುಂದುವರೆಸುವುದಾಗಿ ಅವರು ಹೇಳಿರುವುದಾಗಿ ತಿಳಿದುಬಂದಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

ಇದನ್ನು ನೋಡಿ : ಹುಬ್ಬಳ್ಳಿ | ಪ್ರತ್ಯೇಕ ಪ್ರಕರಣ – ಇಬ್ಬರು ಬಾಲಕಿಯರ ಮೇಲೆ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ – 7 ಮಂದಿ ವಶಕ್ಕೆ




