BBK S12 : ಬಿಗ್ ಬಾಸ್ ಮನೆಯೊಳಗೆ ಮತ್ತೆ ಫೇವರಿಸಂ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಾರದ ಕ್ಯಾಪ್ಟನ್ ಆಗಿರುವ ಗಿಲ್ಲಿ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಕಾವ್ಯಾಗೆ ಫೇವರಿಸಂ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

BBK S12 : ಕಾವ್ಯಾ ಹೆಸರು ಮೂರ್ನಾಲ್ಕು ಬಾರಿ ಬಂದರೂ ಕೂಡ ಗಿಲ್ಲಿ ಅವರು ಒಮ್ಮೆಯೂ ನಾಮಿನೇಟ್ ಮಾಡದೆ ಪ್ರತಿಬಾರಿಯೂ ಸೇವ್ ಮಾಡಿರುವುದು ಇತರ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕಾವ್ಯಾ ಹಾಗೂ ಗಿಲ್ಲಿ ನಡುವೆ ಉತ್ತಮ ಗೆಳೆತನವಿರುವುದು ಎಲ್ಲರಿಗೂ ತಿಳಿದ ವಿಚಾರ. ಇವರ ಜೋಡಿ ಹೊರಗೆ ಯಾವ ರೀತಿಯಲ್ಲಿ ಕಾಣಿಸುತ್ತಿದೆ ಎಂಬುದನ್ನು ಕಾವ್ಯಾಳ ಸಹೋದರ ಫ್ಯಾಮಿಲಿ ವೀಕ್ನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲೇ ಕಾವ್ಯಾಳ ಸಹೋದರ ಕೆಲ ದಿನಗಳ ಹಿಂದೆ ಹೊರಗೆ ಕಳುಹಿಸಲಾಗಿತ್ತು. ಇದೀಗ ಕಾವ್ಯಾ ಗಿಲ್ಲಿಯೊಂದಿಗೆ ಸೇಫ್ ಗೇಮ್ ಆಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಾಮಿನೇಷನ್ ವೇಳೆ ಗಿಲ್ಲಿಯ ನಿರ್ಧಾರಕ್ಕೆ ವಿರೋಧ
ಈ ವಾರ ಕ್ಯಾಪ್ಟನ್ ಆಗಿರುವ ಗಿಲ್ಲಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿದ್ದು, ನಾಮಿನೇಷನ್ನಲ್ಲಿ ಸ್ಪರ್ಧಿಗಳಲ್ಲಿ ಒಬ್ಬರನ್ನು ಸೇವ್ ಮಾಡಿ ಮತ್ತೊಬ್ಬರನ್ನು ನಾಮಿನೇಟ್ ಮಾಡುವ ಜವಾಬ್ದಾರಿ ಅವರಿಗಿತ್ತು.
ಆದರೆ ಧನುಷ್ ಮತ್ತು ಕಾವ್ಯಾ ಹೆಸರು ಬಂದ ಸಂದರ್ಭದಲ್ಲೂ ಗಿಲ್ಲಿ ಕಾವ್ಯಾಳನ್ನೇ ಸೇವ್ ಮಾಡಿ ಧನುಷ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದು ಧನುಷ್ ಹಾಗೂ ಅಶ್ವಿನಿ ಸೇರಿದಂತೆ ಇತರ ಸ್ಪರ್ಧಿಗಳ ಕೋಪಕ್ಕೆ ಕಾರಣವಾಗಿದೆ.
ಇದನ್ನು ಓದಿ : ಚಿನ್ನ ಖರೀದಿಸೋರಿಗೆ ಸಿಹಿ ಸುದ್ದಿ – ಬೆಲೆಯಲ್ಲಿ ಅನಿರೀಕ್ಷಿತ ಬದಲಾವಣೆ
ಹಿಂದಿನ ಸೀಸನ್ನೊಂದಿಗೆ ಹೋಲಿಕೆ
ಕಳೆದ ಸೀಸನ್ನಲ್ಲಿ ಹನುಮಂತ ಮತ್ತು ಧನರಾಜ್ ನಡುವೆ ಗಟ್ಟಿಯಾದ ಗೆಳೆತನ ಇದ್ದರೂ, ಆಟದ ವೇಳೆ ಅದು ಪರಿಣಾಮ ಬೀರುವುದಿಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದರು.
ಅಗತ್ಯ ಬಂದಾಗ ಹನುಮಂತ ಧನರಾಜ್ ಅವರನ್ನು ನಾಮಿನೇಟ್ ಮಾಡಿದ್ದರು. ಆದರೆ ಗಿಲ್ಲಿ ಮಾತ್ರ ಕಾವ್ಯಾ ಜೊತೆಗಿನ ಆಪ್ತತೆಯ ಕಾರಣಕ್ಕೆ ಫೇವರಿಸಂ ಮಾಡುತ್ತಿದ್ದಾರೆ ಎಂಬ ಆರೋಪಗಳು ಬಲವಾಗಿವೆ.
ಗಿಲ್ಲಿಯ ಸ್ಪಷ್ಟನೆಗೂ ಮುಂದುವರಿದ ಚರ್ಚೆ
ಈ ಆರೋಪಗಳ ಬಗ್ಗೆ ಮಾತನಾಡಿರುವ ಗಿಲ್ಲಿ, “ಕಳೆದ ವಾರ ಫ್ಯಾಮಿಲಿ ವೀಕ್ನಲ್ಲಿ ಕಾವ್ಯಾಗೆ ಹೊರಗಿನ ವಿಚಾರಗಳು ತಿಳಿದಿವೆ. ಆ ಅಂಶವನ್ನು ಆಯ್ಕೆ ಮಾಡಿಕೊಂಡಿದ್ದರೆ ನಾನು ಅವರನ್ನು ಸೇವ್ ಮಾಡುತ್ತಿರಲಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಆದರೆ ಈ ಸ್ಪಷ್ಟನೆ ಕೂಡ ಮನೆಮಂದಿಯಲ್ಲಿ ಚರ್ಚೆಯನ್ನು ಇನ್ನಷ್ಟು ಹೆಚ್ಚಿಸಿದೆ.
ವೀಕೆಂಡ್ ಎಪಿಸೋಡ್ನಲ್ಲಿ ದೊಡ್ಡ ಚರ್ಚೆ?
ಒಟ್ಟಿನಲ್ಲಿ ಗಿಲ್ಲಿ ಫೇವರಿಸಂ ವಿಚಾರ ಬಿಗ್ ಬಾಸ್ ಮನೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ವೀಕೆಂಡ್ ಎಪಿಸೋಡ್ನಲ್ಲಿ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಪ್ರೇಕ್ಷಕರು ಗಿಲ್ಲಿಯ ನಿರ್ಧಾರಕ್ಕೆ ಬಿಗ್ ಬಾಸ್ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ.
ಇದನ್ನು ನೋಡಿ : ಕಾಮುಕ ಲೋಕೇಶ್ವರ ಸ್ವಾಮಿಗೆ 35 ವರ್ಷ ಜೈಲು




