ವಾಹನವನ್ನು ಓವರ್ಟೇಕ್ ಮಾಡಲು ಹೋಗಿ ಬೈಕ್ ಸವಾರ ಎದುರಿಗೆ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದು Accident ಸಂಭವಿಸಿದೆ.

ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ Accident ನಲ್ಲಿ, ತಂದೆ ಹಾಗೂ ಎರಡು ವರ್ಷದ ಮಗ ಮೃತಪಟ್ಟು, ನಾಲ್ಕು ವರ್ಷದ ಹೆಣ್ಣುಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಹುಬ್ಬಳ್ಳಿ-ಕಾರವಾರ ರಸ್ತೆಯ ಅಂಚಟಗೇರಿ ಬಳಿ ನಡೆದಿದೆ.
ಇದನ್ನು ಓದಿ : Hubballi |ಝೀರೋ ಟ್ರಾಫಿಕ್ನಲ್ಲಿ ಆಸ್ಪತ್ರೆಗೆ ದಾಖಲಿಸಿದ ನವಜಾತ ಶಿಶು ಸಾವು..!!
KMCRI ಆಸ್ಪತ್ರೆಗೆ ದಾಖಲು
ತಡಸದ ಮೆಹಬೂಬ್ ಖಾನ್ ಉಸ್ತಾದಿ (36) ಹಾಗೂ ಅಸ್ನೇನ್ (2) ಮೃತ ದುರ್ದೈವಿಗಳಾಗಿದ್ದಾರೆ. ಅಜೀಜಾ (4) ಗಾಯಗೊಂಡ ಬಾಲಕಿಯಾಗಿದ್ದು, ತಕ್ಷಣವೇ ಹುಬ್ಬಳ್ಳಿ KMCRI ಆಸ್ಪತ್ರೆಗೆ ದಾಖಲಿಸಲಾಗಿದೆ.
ಓವರ್ಟೇಕ್ ಮಾಡಲು ಹೋಗಿ Accident
ಹುಬ್ಬಳ್ಳಿಯಿಂದ ತಡಸಕ್ಕೆ ಹೋಗುವಾಗ ಮೆಹಬೂಬ್ ಅವರು ಓವರ್ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ನೋಡಿ : TUMAKURU | ಇಂದು Vaikuntha Ekadashi ಸಂಭ್ರಮ ತುಮಕೂರಲ್ಲಿ ಹೇಗಿದೆ ಗೊತ್ತಾ..?




