BBK S12 : ಬಿಗ್ ಬಾಸ್ ಮನೆಯಲ್ಲಿ ದಿನೇದಿನೇ ಸ್ಪರ್ಧಿಗಳ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ಇದೀಗ ರಕ್ಷಿತಾ–ಸ್ಪಂದನಾ ನಡುವಿನ ಕಿತ್ತಾಟ ಭಾರೀ ಚರ್ಚೆಗೆ ಕಾರಣವಾಗಿದೆ. ಮನೆಯಿಂದ ಹೊರಹೋಗಿರುವ ಮಾಳು ವಿಚಾರವೇ ಈ ಜಗಳಕ್ಕೆ ಮೂಲ ಕಾರಣವಾಗಿದೆ.

BBK S12 : ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಇತ್ತೀಚಿನ ಪ್ರೋಮೊದಲ್ಲಿ, ರಕ್ಷಿತಾ ಸ್ಪಂದನಾಗೆ ಟಾಂಗ್ ನೀಡಿದರೆ, ಅದಕ್ಕೆ ಸ್ಪಂದನಾ ಕೂಡ ತೀಕ್ಷ್ಣ ಕೌಂಟರ್ ನೀಡಿದ್ದಾರೆ.
ಮಾಳು ಎಲಿಮಿನೇಷನ್ ವಿಚಾರವನ್ನು ಮುಂದಿಟ್ಟುಕೊಂಡು ಇಬ್ಬರೂ ಪರಸ್ಪರ ಆರೋಪ–ಪ್ರತ್ಯಾರೋಪಕ್ಕೆ ಇಳಿದಿದ್ದಾರೆ.
ಕಾವ್ಯ–ಸ್ಪಂದನಾ ಟಾರ್ಗೆಟ್?
ಇತ್ತೀಚಿನ ದಿನಗಳಲ್ಲಿ ರಕ್ಷಿತಾ, ಕಾವ್ಯ ಮತ್ತು ಸ್ಪಂದನಾ ಇಬ್ಬರನ್ನೂ ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಸೋಮವಾರದ ನಾಮಿನೇಷನ್ನಲ್ಲೂ ಇವರಿಬ್ಬರ ಹೆಸರನ್ನೇ ಮುಂದಿಟ್ಟಿದ್ದ ರಕ್ಷಿತಾ, ಇದೀಗ ಅದೇ ಆಟವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ಹೊಸ ವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ನಿರ್ಬಂಧ.!
“ಮಾಳು ಅಣ್ಣ ಬೆಟರ್” ಹೇಳಿಕೆಗೆ ತೀವ್ರ ಪ್ರತಿಕ್ರಿಯೆ
ರಕ್ಷಿತಾ ಮಾತನಾಡುತ್ತಾ,
“ವ್ಯಕ್ತಿತ್ವದಲ್ಲಿ ಸ್ಪಂದನಾಗಿಂತ ಮಾಳು ಅಣ್ಣ ಬೆಟರ್”
ಎಂದು ಹೇಳಿದ್ದು ಸ್ಪಂದನಾಗೆ ಕೋಪ ತರಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪಂದನಾ,
“ಬೇರೆಯವರನ್ನು ಪೋರ್ಟ್ರೇ ಮಾಡೋದು, ಆಟ ಆಡೋದು ನಿನ್ನ ಸ್ಟ್ರಾಟಜಿ”
ಎಂದು ಕಿಡಿಕಾರಿದ್ದಾರೆ.
“ಮಾಳು ಹೊರಹೋಗೋದಕ್ಕೆ ನೀನೇ ಕಾರಣ” – ಸ್ಪಂದನಾ ಆರೋಪ
ರಕ್ಷಿತಾ,
“ನನ್ನ ಅಭಿಪ್ರಾಯವನ್ನು ಪ್ರಶ್ನೆ ಮಾಡೋದಕ್ಕೆ ಯಾರಿಗೂ ಅಧಿಕಾರ ಇಲ್ಲ”
ಎಂದು ಹೇಳುತ್ತಿದ್ದಂತೆ, ಸ್ಪಂದನಾ ಕಿಡಿಕಾರಿದ್ದಾರೆ.
“ನೀನು ನಿನ್ನ ಅಭಿಪ್ರಾಯ ಹೇಳಬಹುದು ಅಂದ್ರೆ, ನಾನೂ ಹೇಳಬಹುದು.
ಮಾಳು ಅಣ್ಣ ಹೊರಹೋಗೋದಕ್ಕೆ ನೀನೇ ಕಾರಣ.
ಅವರು ಮಾತಾಡ್ಬೇಕಾದ ಜಾಗದಲ್ಲಿ ನೀನೇ ಮಾತಾಡಿ, ಅವರನ್ನು ಮನೆಗೆ ಕಳಿಸಿದ್ದೀಯಾ”
ಎಂದು ತೀವ್ರ ಆರೋಪ ಮಾಡಿದ್ದಾರೆ.
ಒಟ್ಟಾರೆ, ರಕ್ಷಿತಾ ವರ್ಸಸ್ ಸ್ಪಂದನಾ–ಕಾವ್ಯ ನಡುವಿನ ಸಂಘರ್ಷ ಬಿಗ್ ಬಾಸ್ ಮನೆಯಲ್ಲಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದಲ್ಲೊಂದು ವಿಚಾರಕ್ಕೆ ಪರಸ್ಪರ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದಾರೆ.
ಈ ಜಿದ್ದಿನ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನು ನೋಡಿ : ತುಮಕೂರಿಗರೇ ಹುಷಾರ್ – ಈ ROWDY DOCTOR ಹತ್ತಿರ TREATMENT ತಗೊಂಡ್ರೆ ಜೀವಕ್ಕೆ ಗ್ಯಾರಂಟಿನೇ ಇಲ್ಲ..?




