Bagalakote : ಬೆಂಗಳೂರಿಂದ (Bengaluru) ರಾಜಸ್ಥಾನದ ಜೋಧಪುರ್ಗೆ(Jodhpur) ಹೊರಟಿದ್ದ ಖಾಸಗಿ ಬಸ್ಸಿನ ಎಂಜಿನ್ನಲ್ಲಿ ಹೊಗೆ(Smoke) ಕಾಣಿಸಿದೆ.

Bagalakote : ಬೆಂಗಳೂರಿನಿಂದ ರಾಜಸ್ಥಾನದ ಜೋಧಪುರ್ಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೂಡೂರು ಬಳಿ ಸಂಭವಿಸಿದೆ. ಬಿಆರ್ ಟ್ರಾವೆಲ್ಸ್ಗೆ ಸೇರಿದ ಬಸ್ ಚಲಿಸುತ್ತಿದ್ದಾಗ ಏಕಾಏಕಿ ಎಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡಿದೆ.
ಬಸ್ನಲ್ಲಿ ತಾಂತ್ರಿಕ ದೋಷ
ತಕ್ಷಣ ಪರಿಸ್ಥಿತಿಯನ್ನು ಗಮನಿಸಿದ ಚಾಲಕ ಬಸ್ ಅನ್ನು ರಸ್ತೆಯ ಬದಿಗೆ ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ್ದಾನೆ. ಪ್ರಯಾಣಿಕರು ತಮ್ಮ ಲಗೇಜ್ಗಳೊಂದಿಗೆ ಬಸ್ನಿಂದ ಇಳಿದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ಅಪಾಯ ತಪ್ಪಿದಂತಾಗಿದೆ.
ಇದನ್ನೂ ಓದಿ : ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ – ಓರ್ವ ಸಾವು
ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ಅಪಾಯ
ಘಟನೆಯ ಬಳಿಕ ಇಳಕಲ್ನಿಂದ ಮೆಕ್ಯಾನಿಕ್ನ್ನು ಕರೆಸಲಾಗಿದ್ದು, ಬಸ್ನ ರಿಪೇರಿ ಕಾರ್ಯ ಆರಂಭಿಸಲಾಗಿದೆ. ರಿಪೇರಿ ಯಶಸ್ವಿಯಾದಲ್ಲಿ ಈ ಬಸ್ ಮುಂದುವರಿದು ರಾಜಸ್ಥಾನದ ಜೋಧಪುರ್ಗೆ ತೆರಳಲಿದೆ ಎಂದು ಬಿಆರ್ ಟ್ರಾವೆಲ್ಸ್ ತಿಳಿಸಿದೆ.
ಆದರೆ, ತಾಂತ್ರಿಕ ದೋಷ ಸರಿಯಾಗದಿದ್ದರೆ ಪ್ರಯಾಣಿಕರನ್ನು ಬೇರೊಂದು ಬಸ್ ಮೂಲಕ ಗಮ್ಯಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಘಟನೆಯಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಉಂಟಾದರೂ, ಯಾವುದೇ ಅಪಘಾತ ಸಂಭವಿಸದೆ ಎಲ್ಲರೂ ಸುರಕ್ಷಿತರಾಗಿದ್ದಾರೆ.
MUST WATCH: ಭಾರೀ ಸ್ಪೋಟ – ಓರ್ವ ಸಾವು, ಮೂವರ ಸ್ಥಿತಿ ಗಂಭೀರ




