Bengaluru : ಡಿ.31ರಂದು ಬೆಳಿಗ್ಗೆ 6ರಿಂದ ತಡರಾತ್ರಿ 1ರವರೆಗೆ ಮದ್ಯದ ವಹಿವಾಟಿಗೆ ಅನುಮತಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ Bengaluru ನಗರದಲ್ಲಿ ವಿಶೇಷ ಸಾಂದರ್ಭಿಕ ಅಬಕಾರಿ ಸನ್ನದುದಾರರಿಗೆ (CL-5) ಮದ್ಯದ ವಹಿವಾಟು ಹಾಗೂ ಸೇವನೆಗೆ ಸಮಯ ವಿಸ್ತರಣೆ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮದ್ಯ ಸೇವನೆಗೆ ಅನುಮತಿ – Bengaluru
ಆದೇಶದಂತೆ, ಡಿಸೆಂಬರ್ 31ರಂದು ಬೆಳಿಗ್ಗೆ 6 ಗಂಟೆಯಿಂದ ತಡರಾತ್ರಿ 1 ಗಂಟೆಯವರೆಗೆ CL-5 ಸನ್ನದು ಹೊಂದಿರುವವರಿಗೆ ಮದ್ಯ ಮಾರಾಟ ಮತ್ತು ಮದ್ಯ ಸೇವನೆಗೆ ಅನುಮತಿ ನೀಡಲಾಗಿದೆ. ಸಾಮಾನ್ಯ ದಿನಗಳಲ್ಲಿ CL-5 ಸನ್ನದುದಾರರಿಗೆ ಬೆಳಿಗ್ಗೆ 10.30ರಿಂದ ರಾತ್ರಿ 12 ಗಂಟೆಯವರೆಗೆ ಮಾತ್ರ ಮದ್ಯ ವಹಿವಾಟು ನಡೆಸಲು ಅವಕಾಶವಿರುತ್ತದೆ. ಆದರೆ ಹೊಸ ವರ್ಷಾಚರಣೆಯ ವಿಶೇಷ ಸಂದರ್ಭದಲ್ಲಿ ಈ ಸಮಯವನ್ನು ವಿಸ್ತರಿಸಲಾಗಿದೆ.

ವಿಶೇಷ ಅಬಕಾರಿ ಪರವಾನಗಿ
CL-5 ಸನ್ನದು ತಾತ್ಕಾಲಿಕವಾಗಿ 24 ಗಂಟೆಗಳ ಅವಧಿಗೆ ನೀಡಲಾಗುವ ವಿಶೇಷ ಅಬಕಾರಿ ಪರವಾನಗಿಯಾಗಿದ್ದು, ಖಾಸಗಿ ಪಾರ್ಟಿಗಳು, ನಿರ್ದಿಷ್ಟ ದಿನಗಳಲ್ಲಿ ನಡೆಯುವ ಸಮಾರಂಭಗಳು ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಮದ್ಯ ಮಾರಾಟ ಅಥವಾ ಪೂರೈಕೆಗೆ ಅವಕಾಶ ಕಲ್ಪಿಸುತ್ತದೆ. ಈ ಲೈಸೆನ್ಸ್ ಹೊಂದಿರುವವರು ಸಾಮಾನ್ಯವಾಗಿ ಹೊಸ ವರ್ಷದಂತಹ ವಿಶೇಷ ದಿನಗಳಲ್ಲಿ ಒಂದೇ ದಿನಕ್ಕೆ ಮದ್ಯ ಮಾರಾಟ ಮಾಡಲು ಅರ್ಹರಾಗಿರುತ್ತಾರೆ.
ಇದನ್ನು ನೋಡಿ : ನೀರಿನ ಬಿಲ್ ಬಾಕಿದಾರರಿಗೆ ಬಂಪರ್ ಆಫರ್
ಕಠಿಣ ಕ್ರಮ
ಅಬಕಾರಿ ಇಲಾಖೆ ನಿಯಮಾವಳಿಗಳಂತೆ CL-5 ಸನ್ನದುದಾರರು ಮದ್ಯದ ಸರಕುಗಳನ್ನು ಖರೀದಿಸಬೇಕು ಹಾಗೂ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ. CL-5 ಸನ್ನದು ಇಲ್ಲದೆ ಯಾವುದೇ ವಿಶೇಷ ಸಾಂದರ್ಭಿಕ ಕಾರ್ಯಕ್ರಮಗಳಲ್ಲಿ ಮದ್ಯ ಮಾರಾಟ ಅಥವಾ ಮದ್ಯ ಸೇವನೆ ನಡೆಸುವುದು ಕಾನೂನುಬಾಹಿರವಾಗಿದ್ದು, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಹೆಚ್ಚುವರಿ ಭದ್ರತಾ ವ್ಯವಸ್ಥೆ
ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ನಗರಾದ್ಯಂತ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.ಇನ್ನು ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಇಂದು ಬಿಗ್ ಬಾಸ್ ಮನೆಯಿಂದ ಮತ್ತೊಬ್ಬರು ಔಟ್!




