BBK S12 : ಬಿಗ್ ಬಾಸ್ನಲ್ಲಿ ಸದ್ಯ ಫ್ಯಾಮಿಲಿ ವೀಕ್ ಕೂಡ ಆಗಿದೆ. ಗಿಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಹಿಂದಿನ ವಾರವೇ ಸುದೀಪ್ ಅವರು ತಾವು ಈ ವೀಕೆಂಡ್ಗೆ ಬರೋದಿಲ್ಲ ಅಂತ ಅನೌನ್ಸ್ ಮಾಡಿದ್ದರು.

BBK S12 : ಸುದೀಪ್ ಅವರ ಬದಲಿಗೆ ಯಾರು ಬರ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ. ಸದ್ಯ ಮನೆಯಲ್ಲಿ ಹೊಸ ಕ್ಯಾಪ್ಟನ್ ಗಿಲ್ಲಿ ನಟನ ನಾಯಕತ್ವ ಮತ್ತು ಕಾವ್ಯಾ ಆಟದ ಬದಲಾವಣೆಗಳು ಸಂಚಿಕೆಯ ಕುತೂಹಲವನ್ನು ಹೆಚ್ಚಿಸಿವೆ..
ಬಿಗ್ ಬಾಸ್ನಲ್ಲಿ (Bigg Boss Kannada 12) ಸದ್ಯ ಫ್ಯಾಮಿಲಿ ವೀಕ್ ಕೂಡ ಆಗಿದೆ. ಗಿಲ್ಲಿ ಕ್ಯಾಪ್ಟನ್ ಆಗಿದ್ದಾರೆ.
ಹಿಂದಿನ ವಾರವೇ ಸುದೀಪ್ ಅವರು ತಾವು ಈ ವೀಕೆಂಡ್ಗೆ ಬರೋದಿಲ್ಲ ಅಂತ ಅನೌನ್ಸ್ ಮಾಡಿದ್ದರು.
ಹಾಗಾಗಿ ಸುದೀಪ್ ಅವರ ಬದಲಿಗೆ (Weekend) ಯಾರು ಬರ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.
ಸದ್ಯ ಮನೆಯಲ್ಲಿ ಹೊಸ ಕ್ಯಾಪ್ಟನ್ (Captain) ಗಿಲ್ಲಿ ನಟನ ನಾಯಕತ್ವ ಮತ್ತು ಕಾವ್ಯಾ ಆಟದ ಬದಲಾವಣೆಗಳು ಸಂಚಿಕೆಯ ಕುತೂಹಲವನ್ನು ಹೆಚ್ಚಿಸಿವೆ.
ಕೆಡಿ ಟೀಂ ಎಂಟ್ರಿ?
ವರದಿಯ ಪ್ರಕಾರ ಬಿಗ್ಬಾಸ್ ಮನೆಗೆ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಈ ಇಬ್ಬರು ಸ್ಟಾರ್ ಕಾಂಬಿನೇಷನ್ನಲ್ಲಿ ‘KD: The Devil’ ಸಿನಿಮಾ ಮೂಡಿಬಂದಿದ್ದು, ಚಿತ್ರದ ಪ್ರಚಾರಕ್ಕಾಗಿ ಬಿಬಿ ಹೌಸ್ಗೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ.
ಅಣ್ತಮ್ಮ ಜೋಡೆತ್ತು ಕಣೋ ಸುಂದರ ಹಾಡು ರಿಲೀಸ್ ಆಗಿದ್ದು, ಜನಪ್ರಿಯವಾಗುತ್ತಿದೆ. ಅರ್ಜುನ್ ಜನ್ಯ ಸಂಗೀತದ ಹಾಡಿಗೆ ನಿರ್ದೇಶಕ ಪ್ರೇಮ್ ಧ್ವನಿಯಾಗಿದ್ದಾರೆ.
ಇದನ್ನು ಓದಿ : ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ದಾರುಣ ಸಾವು
ಸಿನಿಮಾ ಯಾವಾಗ ರಿಲೀಸ್
ಹಲವು ಸಮಯದಿಂದ ಕೆಡಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಲೇ ಇತ್ತು.
ಆದರೆ ಚಿತ್ರತಂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ಈ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಚಿತ್ರತಂಡವು 2026ರ ಏಪ್ರಿಲ್ 30 ರಂದು ಕೆಡಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ.
(ಡಿ.26) ರಿಲೀಸ್ ಆಗಿರುವ ಹೊಸ ಹಾಡಿನೊಂದಿಗೆ ಸೈಲೆಂಟ್ ಆಗಿಯೇ ಸಿನಿಮಾ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ ಕೆಡಿ ಟೀಮ್. ಅಲ್ಲಿಗೆ ಈ ಚಿತ್ರ ತೆರೆಗೆ ಬರಲು ಅಭಿಮಾನಿಗಳು ಇನ್ನೂ 4 ತಿಂಗಳು ಕಾಯಬೇಕಿದೆ.
ಇನ್ನು, ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ ಹಾಗೂ ಕನ್ನಡದ ರವಿಚಂದ್ರನ್, ರಮೇಶ್ ಅರವಿಂದ್ ಮತ್ತು ರೀಷ್ಮಾ ನಾಣಯ್ಯ ಮುಂತಾದವರು ನಟಿಸಿದ್ದಾರೆ. ನೋರಾ ಫತೇಹಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇದನ್ನು ನೋಡಿ : MYSURU PALACE ಮುಂದೆ ಭಾರೀ ಸ್ಪೋಟ – ಓರ್ವ ಸಾವು, ಮೂವರ ಸ್ಥಿತಿ ಗಂಭೀರ




