Gold Rate ಇಂದೂ ಸಹ ಏರಿಕೆ ಕಂಡು ಬಂದಿದೆ.

ಚಿನ್ನದ ದರದಲ್ಲಿ ಇಂದೂ ಸಹ ಏರಿಕೆ ಮುಂದುವರೆದಿದೆ. ಡಿಸೆಂಬರ್ 24ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ 1 ಗ್ರಾಂ ದರವು 35 ರೂ. ಹೆಚ್ಚಳಗೊಂಡು 12,735 ರೂ. ಆಗಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ 1 ಗ್ರಾಂ ದರವು 38 ರೂ. ಏರಿಕೆಯೊಂದಿಗೆ 13,893 ರೂ. ಆಗಿದೆ.
22 ಕ್ಯಾರಟ್ Gold Rate ನೋಡಿದರೆ, 8 ಗ್ರಾಂ ಚಿನ್ನಕ್ಕೆ 1,01,880 ರೂ., 10 ಗ್ರಾಂಗೆ 1,27,350 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 12,73,500 ರೂ. ಪಾವತಿಸಬೇಕಾಗಿದೆ. ಇನ್ನು 24 ಕ್ಯಾರಟ್ ಚಿನ್ನದಲ್ಲಿ 8 ಗ್ರಾಂಗೆ 1,11,144 ರೂ., 10 ಗ್ರಾಂಗೆ 1,38,930 ರೂ. ಹಾಗೂ 100 ಗ್ರಾಂಗೆ 13,89,300 ರೂ. ಆಗಿದೆ.
ಇದನ್ನು ಓದಿ : ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ
ವಿವಿಧ ನಗರಗಳಲ್ಲಿನ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
| ಚೆನ್ನೈ | 12,735 ರೂ. | 13,893 ರೂ. |
| ಮುಂಬೈ | 12,735 ರೂ. | 13,893 ರೂ. |
| ದೆಹಲಿ | 12,735 ರೂ. | 13,893 ರೂ. |
| ಕೋಲ್ಕತ್ತಾ | 12,735 ರೂ. | 13,893 ರೂ. |
| ಹೈದರಾಬಾದ್ | 12,735 ರೂ. | 13,893 ರೂ. |
ಬೆಳ್ಳಿ ದರದಲ್ಲೂ ಹೆಚ್ಚಳ
ಇತ್ತ ಬೆಳ್ಳಿ ದರದಲ್ಲಿಯೂ ಭಾರೀ ಏರಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಯ ದರದಲ್ಲಿ 10 ರೂ. ಹೆಚ್ಚಳವಾಗಿ 233 ರೂ. ಆಗಿದೆ. 10 ಗ್ರಾಂ ಬೆಳ್ಳಿಗೆ 2,330 ರೂ. ಇದ್ದರೆ, 1 ಕೆಜಿ ಬೆಳ್ಳಿಗೆ 2,33,000 ರೂ. ಪಾವತಿಸಬೇಕಾಗಿದೆ.
ಚಿನ್ನ–ಬೆಳ್ಳಿ ದರಗಳ ಈ ಏರಿಕೆಯಿಂದ ಗ್ರಾಹಕರ ಜೇಬಿನ ಮೇಲೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ದರಗಳಲ್ಲಿ ಏರುಪೇರು ಮುಂದುವರಿಯುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು ಹಾಗೂ ಗ್ರಾಹಕರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.
ಇದನ್ನು ನೋಡಿ : ಮಗಳ ಮದ್ವೆ ಮಾಡಿಕೊಡಲ್ಲ ಅಂದಿದ್ಕೆ ತಾಯಿಗೆ ಬೆಂಕಿ ಹಚ್ಚಿ ವಿಕೃತಿ




