Hubballi ಇನಾಂ ವೀರಾಪುರದಲ್ಲಿ 19 ವರ್ಷದ ಗರ್ಭಿಣಿ ಯುವತಿ ಮಾನ್ಯ ಅವರನ್ನು ತಮ್ಮ ತಂದೆ ಪ್ರಕಾಶಗೌಡ ಬರ್ಬರವಾಗಿ ಕೊಲೆ ಮಾಡಿದ್ದು, ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಬಂಧಿತರು ಈಗ ಪೊಲೀಸರಿಗೆ ವಶ.

Hubballi ಇನಾಂ ವೀರಾಪುರದಲ್ಲಿ ಮಾನವ ಕುಲವನ್ನೇ ನಾಚಿಸುವಂತಹ ಮರ್ಯಾದೆ ಹತ್ಯೆ ನಡೆದಿದೆ. 19 ವರ್ಷದ ಗರ್ಭಿಣಿ ಯುವತಿ ಮಾನ್ಯ ಅವರನ್ನು ತಮ್ಮ ಹೆತ್ತ ತಂದೆ ಪ್ರಕಾಶಗೌಡ ಪಾಟೀಲ್ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ನಾಗರಿಕ ಸಮಾಜದಲ್ಲಿ ಆಕ್ರೋಶ ಮೂಡಿಸಿದೆ. ಪೊಲೀಸರ ತ್ವರಿತ ಕಾರ್ಯವೈಖರಿ ಯಲ್ಲಿ ತಾತ್ಕಾಲಿಕವಾಗಿ ಮೂರು ಮಂದಿಯನ್ನು ಬಂಧಿಸಲಾಗಿದೆ.
ಮಾನ್ಯ, ವೀರಶೈವ ಲಿಂಗಾಯತ ಸಮುದಾಯದ ಯುವತಿ, ದಲಿತ ಸಮುದಾಯದ ಯುವಕ ವಿವೇಕಾನಂದ ಅವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಮನೆಯವರು ಈ ಅಂತರ್ಜಾತಿ ಮದುವೆ ವಿರೋಧಿಸಿದ್ದರು.
ಇದನ್ನು ಓದಿ : ಕುಡಿಯುವ ನೀರಿಗಾಗಿ ಪರದಾಟ – ಖಾಸಗಿ ಬೋರ್ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಆರಂಭದಲ್ಲಿ ಮನೆಬಿಟ್ಟು ಓಡಿಹೋಗಿ ಮದುವೆಯಾಗಿದ್ದ ಮಾನ್ಯ, ಏಳು ತಿಂಗಳ ಗರ್ಭಿಣಿ ಆಗಿದ್ದಳು. ನಿನ್ನೆ ಸಂಜೆ ಅವರು ತಮ್ಮ ಊರಿಗೆ ಹಿಂತಿರುಗಿದಾಗ, ಹೆತ್ತ ತಂದೆ ಪ್ರಕಾಶಗೌಡ ಮಾನ್ಯ ಅವರನ್ನು ಕೊಡಲಿಯಿಂದ ಹೊಡೆದು ಬರ್ಬರ ಕೊಲೆ ಮಾಡಿದ್ದು, ಈ ರಾಕ್ಷಸಿ ಕೃತ್ಯ ನೆಲಕ್ಕೆ ಬಿದ್ದಿದ್ದಂತಾಗಿದೆ.
ಮಾನ್ಯ ಅವರ ಪತಿ ಮತ್ತು ಸಂಬಂಧಿಕರು ಕೂಡ ಆ ಘಟನೆಯ ವೇಳೆ ಸ್ಥಳಕ್ಕೆ ಬಂದಿದ್ದರು. ಹಲ್ಲೆ ಮತ್ತು ಹಿಂಸಾಚಾರ ನಡೆದ ಬಳಿಕ, ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕಾಶಗೌಡ ಪಾಟೀಲ್ (ತಂದೆ) , ಈರನಗೌಡ , ಅರುಣ್ ಬಂದ್ಡನ ಬಳಿಕ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಕಠಿಣ ತನಿಖೆ ನಡೆಯುತ್ತಿದೆ.
ಮಾನ್ಯ ಹತ್ಯೆಯ ಸುದ್ದಿಗೆ ಧಾರವಾಡ ಮತ್ತು ಹುಬ್ಬಳ್ಳಿ ನಗರದಲ್ಲಿ ಪ್ರತಿಭಟನೆಗಳು, ಆಕ್ರೋಶದ ಘೋಷಣೆಗಳು ನಡೆದವು. ದಲಿತಪರ ಮುಖಂಡರು ನ್ಯಾಯಕ್ಕಾಗಿ ಕೋರಿಕೆ ಸಲ್ಲಿಸಿದ್ದರು. ಶವವನ್ನು ಹಳ್ಳದ ಬಳಿ ಮೆರವಣಿಗೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಇದನ್ನು ನೋಡಿ : ಅನೈತಿಕ ಸಂಬಂಧಕ್ಕೆ ಕರೆ, ಬರದಿದ್ದುದಕ್ಕೆ ಯುವಕನಿಗೆ ಮಚ್ಚಿನ ಅಟ್ಯಾಕ್!




