Gruha Lakshmi Schemes : ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಕಾದುಕುಳಿತಿರುವ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ

Gruha Lakshmi Schemes : ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಕಾದುಕುಳಿತಿರುವ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ಗೃಹಲಕ್ಷ್ಮೀ ಯೋಜನೆಯ 24ನೇ ಕಂತಿನ ಹಣವನ್ನು ಸೋಮವಾರದಿಂದ ಶನಿವಾರದೊಳಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹಣಕಾಸು ಇಲಾಖೆ ಒಪ್ಪಿಗೆ- ಹಣ ಬಿಡುಗಡೆ ಖಚಿತ
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್,
“ಗೃಹಲಕ್ಷ್ಮೀ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದೆ. ಮುಂದಿನ ವಾರ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ”
ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲೂ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನು ಓದಿ : Belagavi|ಬುದ್ಧಿಮಾಂದ್ಯ ಮಕ್ಕಳಿಗೆ ಟಾರ್ಚರ್ ಕೊಟ್ಟ ದಂಪತಿ ಅರೆಸ್ಟ್..!
ಸತ್ತವರ ಖಾತೆಗೆ ಹಣ ಹೋಗುವುದಕ್ಕೆ ಬ್ರೇಕ್
ಗೃಹಲಕ್ಷ್ಮೀ ಯೋಜನೆಯ ಹಣ ಸತ್ತವರ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತಿರುವ ಕುರಿತು ಸಚಿವೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ
- ಮುಖ್ಯ ಕಾರ್ಯದರ್ಶಿ (CS) ನೇತೃತ್ವದಲ್ಲಿ ಎರಡು ಸಭೆ ನಡೆಸಲಾಗಿದೆ
- ಹೊಸ ಸಾಫ್ಟ್ವೇರ್ ಅಭಿವೃದ್ಧಿ ಅಳವಡಿಕೆ ಮಾಡಲಾಗಿದೆ
- ಮರಣ ಪ್ರಮಾಣ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತರು ಪರಿಶೀಲನೆ ಮಾಡಲಿದ್ದಾರೆ
ಹೀಗಾಗಿ ಸತ್ತವರ ಖಾತೆಗೆ ಹಣ ಹೋಗುವುದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ತಪ್ಪಾಗಿ ಸತ್ತವರ ಖಾತೆಗೆ ಜಮಾ ಆಗಿರುವ ಹಣವನ್ನು ವಾಪಸ್ ಪಡೆಯುವಂತೆ ಕೆಲವು ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್ಗಳಿಗೆ ನೋಟಿಸ್ ಹಾಗೂ ಪತ್ರಗಳನ್ನು ರವಾನಿಸಿದ್ದಾರೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲಾ ವಿಭಜನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ,
“ಮುಖ್ಯಮಂತ್ರಿಗಳ ಮನಸ್ಸಿನಲ್ಲಿ ಜಿಲ್ಲೆ ವಿಭಜನೆ ಮಾಡುವ ಚಿಂತನೆ ಇದೆ. ಆಡಳಿತಾತ್ಮಕ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅಗತ್ಯ”
ಎಂದರು.
ತಾಲೂಕಿನಲ್ಲಿ ಸುಮಾರು 11.5 ಲಕ್ಷ ಜನಸಂಖ್ಯೆ ಇದ್ದು,
ಒಬ್ಬ ತಹಶೀಲ್ದಾರ್ಗೆ ಇಷ್ಟೊಂದು ಜನಸಂಖ್ಯೆಯನ್ನು ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 19 ತಾಲೂಕುಗಳು ಆಗುವ ಸಾಧ್ಯತೆ ಇದೆ.ಮುಖ್ಯಮಂತ್ರಿಗಳು ಜಿಲ್ಲೆ ವಿಭಜನೆ ಘೋಷಣೆ ಮಾಡುವ ಉದ್ದೇಶದಿಂದಲೇ ಬಂದಿದ್ದರು. ಆದರೆ ಹಲವಾರು ನಿಯೋಗಗಳು ಭೇಟಿ ನೀಡಿದ್ದರಿಂದ ಈ ಬಾರಿ ಚರ್ಚೆಗೆ ಬಾರದೆ ಉಳಿಯಿತು ಎಂದು ಸಚಿವೆ ಹೇಳಿದ್ದಾರೆ.
ಇದನ್ನು ನೋಡಿ : ಡಿ. 26ರಿಂದ ಟ್ರೈನ್ ಟಿಕೆಟ್ ಬೆಲೆಯಲ್ಲಿ ಅಲ್ಪ ಹೆಚ್ಚಳ




