
ಕರಾವಳಿಯ ಜನಪರಂಪರೆಯಲ್ಲಿ ಒಂದಾಗಿರುವ ಪ್ರಸಿದ್ದಿ ಪಡೆದ ಕಂಬಳ ಕ್ರೀಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರೋತ್ಸಾಹ ಸಿಕ್ಕಿದೆ.ಕಂಬಳವನ್ನು ‘ರಾಜ್ಯ ಕ್ರೀಡೆ’ ಎಂದು ಘೋಷಿಸಲುಸರ್ಕಾರ ತೀರ್ಮಾನಿಸಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ. ಇದರೊಂದಿಗೆ, ಕಂಬಳ ಕ್ರೀಡೆಗೆ ಸಹ ಇತರ ಮಾನ್ಯತೆ ಪಡೆದ ಕ್ರೀಡೆಗಳಂತೆರಾಜ್ಯ ಕ್ರೀಡಾ ಪ್ರಾಧಿಕಾರದಿಂದ ಸೌಲಭ್ಯಗಳು, ಅನುದಾನ, ಮತ್ತು ವೇತನದ ಅವಕಾಶಗಳುಲಭಿಸುವ ಸಾಧ್ಯತೆ ಇದೆ.
ಇನ್ನು ಈ ನಿರ್ಧಾರದಂತೆ, ಕಂಬಳ ಅಸೋಸಿಯೇಷನ್ನ ನೇಮಕಾತಿ ಕೂಡ ಈಗಾಗಲೇ ಅಂತಿಮ ಹಂತದಲ್ಲಿದೆ. ಸಮಿತಿಯ ಅಧ್ಯಕ್ಷರು ಈಗಕಂಬಳ ಅಸೋಸಿಯೇಶನ್ನ ಅಧ್ಯಕ್ಷರಾಗಿದ್ದು, ಈ ಕ್ರೀಡೆಗೆ ಸಂಸ್ಥಿತ ರೂಪ ನೀಡುವ ಕೆಲಸ ಆರಂಭವಾಗಿದೆ. ಕೋಣದ ಮಾಲೀಕರು, ಓಟಗಾರರು, ಹಾಗೂ ಕಂಬಳದಲ್ಲಿ ಭಾಗಿಯಾಗುವ ಇತರರಿಗೆ ಹೆಚ್ಚಿನ ಪ್ರೋತ್ಸಾಹದ ಜೊತೆಗೆ ವಿಶೇಷ ಧನಸಹಾಯ ಮತ್ತು ತರಬೇತಿ ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ.
ಪ್ರಾಣಿಹಿಂಸೆ ವಿವಾದಗಳ ನಡುವೆಯೇ ನಡೆದಿದ್ದ ಕಂಬಳ ಈಗ ಸರ್ಕಾರದಿಂದ ಒಪ್ಪಿಗೆಯೊಂದಿಗೆರಾಜ್ಯ ಮಟ್ಟದ ಗೌರವಪಡೆಯುತ್ತಿರುವುದು ಜಾನಪದ ಕ್ರೀಡೆಗೆ ಹೊಸ ಉಜ್ವಲಯೋಗವನ್ನು ತಂದಿದೆ. ಈ ಮೂಲಕ ಸ್ಥಳೀಯ ಸಂಸ್ಕೃತಿ, ಮಣ್ಣಿನ ಪರಂಪರೆ ಹಾಗೂ ಗ್ರಾಮೀಣ ಕ್ರೀಡಾ ಪರಂಪರೆಯ ಪ್ರಚಾರವೂ ಸಾದ್ಯವಾಗಲಿದೆ.




