Political News : ಡಿಕೆ ಶಿವಕುಮಾರ್ ಅವರೇ, ನೀವು ಶಾಸಕರಾದರೇನು ? ಮಂತ್ರಿಯಾದರೇನು ? ಡಿಸಿಎಂ ಆದರೇನು ? ನೀನೊಬ್ಬ ಮನುಷ್ಯ ಅಷ್ಟೇ. ಜನರಿಂದ ಆಯ್ಕೆಯಾದ ನೀವು…!

Political News : ಡಿಸಿಎಂ ರಾಜೀನಾಮೆಗೆ ಆಗ್ರಹಿಸಿದ ಜೆಡಿಎಸ್
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಜಾತ್ಯಾತೀತ ಜನತಾದಳ (JDS) ತೀವ್ರ ವಾಗ್ದಾಳಿ ಮುಂದುವರೆಸಿದ್ದು, ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದೆ. ಡಿಕೆಶಿ ನೀಡಿದ ಹೇಳಿಕೆಗಳು ಜನಪ್ರತಿನಿಧಿಗೆ ಶೋಭೆ ತರದವು ಎಂದು ಜೆಡಿಎಸ್ ಕಿಡಿಕಾರಿದೆ.
ಅಪಾರ್ಟ್ಮೆಂಟ್ ಮಸೂದೆ ಸಂವಾದದಲ್ಲಿ ಡಿಕೆಶಿ ಹೇಳಿಕೆಗೆ ವಿರೋಧ
ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಆಯೋಜಿಸಿದ್ದ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ 2025 ಕುರಿತ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.
ಈ ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸಿರುವ ಜೆಡಿಎಸ್, ಇಂತಹವರು ಜನಪ್ರತಿನಿಧಿಯಾಗಿ ಮುಂದುವರಿಯಲು ನಾಲಾಯಕ್ ಎಂದು ಕಿಡಿಕಾರಿದೆ.
ಜೆಡಿಎಸ್ ಸರಣಿ ಟ್ವೀಟ್ಗಳಲ್ಲಿ ತೀವ್ರ ಆಕ್ರೋಶ
ಈ ಕುರಿತು ಜೆಡಿಎಸ್ ಸರಣಿ ಟ್ವೀಟ್ಗಳನ್ನು ಮಾಡಿದ್ದು,
“ಡಿಕೆ ಶಿವಕುಮಾರ್ ಅವರೇ, ನೀವು ಶಾಸಕರಾದರೇನು? ಮಂತ್ರಿಯಾದರೇನು? ಡಿಸಿಎಂ ಆದರೇನು? ನೀನೊಬ್ಬ ಮನುಷ್ಯ ಅಷ್ಟೇ. ಜನರಿಂದ ಆಯ್ಕೆಯಾದ ನೀವು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪ್ರಶ್ನೆ ಮಾಡಿದವರಿಗೆ ಧಮ್ಕಿ, ಬೆದರಿಕೆ ಹಾಕುವುದು ಸಂವಿಧಾನದ ಪ್ರಕಾರ ಅಪರಾಧ”
ಎಂದು ಹೇಳಿದೆ.
“ನಿಮ್ಮ ಹಣ ನಾಯಿ ಮೊಲೆ ಹಾಲಿದ್ದಂಗೆ” – ತೀಕ್ಷ್ಣ ಪದ ಬಳಕೆ
ಮುಂದುವರೆದು ಜೆಡಿಎಸ್,
“ಡಿಕೆಶಿ ಅವರೇ, ನಿಮ್ಮ ಬಳಿ ದುಡ್ಡಿದ್ದರೆ ಅದು ‘ನಾಯಿ ಮೊಲೆ ಹಾಲಿದ್ದಂಗೆ’ – ಯಾರಿಗೂ ಪ್ರಯೋಜನವಿಲ್ಲ. ಅಧಿಕಾರದ ಮದ, ದಬ್ಬಾಳಿಕೆ ನೆತ್ತಿಗೇರಿದೆ. ರೌಡಿಸಂ, ಗೂಂಡಾ ಪ್ರವೃತ್ತಿಗೆ ಕಡಿವಾಣ ಹಾಕದಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ”
ಎಂದು ತೀವ್ರ ಪದಗಳಲ್ಲಿ ಟೀಕಿಸಿದೆ.
ಕಾಂಗ್ರೆಸ್ ಹೈಕಮಾಂಡ್ಗೆ ಸವಾಲು
ಇನ್ನೊಂದು ಟ್ವೀಟ್ನಲ್ಲಿ,
“ಸಂವಿಧಾನ ರಕ್ಷಿಸುತ್ತೇವೆ ಎನ್ನುವ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಮೊದಲು ಡಿಕೆಶಿಯಂತಹ ರೌಡಿ ರಾಜಕಾರಣಿಯ ರಾಜೀನಾಮೆ ಪಡೆಯಬೇಕು. ಬಳಿಕ ದೇಶದ ಜನತೆಗೆ ಸಂವಿಧಾನದ ಪಾಠ ಹೇಳಲಿ”
ಎಂದು ಜೆಡಿಎಸ್ ಸವಾಲು ಹಾಕಿದೆ.
“ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಜನರದ್ದು”
ಜೆಡಿಎಸ್ ಮತ್ತೊಂದು ಟ್ವೀಟ್ನಲ್ಲಿ,
“ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಸಂವಿಧಾನ ಪುಸ್ತಕ ಹಿಡಿದರೆ ಸಾಕಾಗದು. ಈ ದರ್ಪ, ದುರಂಹಕಾರಕ್ಕೆ ಮತಹಾಕುವ ಜನರೇ ಬುದ್ಧಿ ಕಲಿಸುತ್ತಾರೆ”
ಎಂದು ಎಚ್ಚರಿಕೆ ನೀಡಿದೆ.
ಇದನ್ನು ಓದಿ : Yashasvi Jaiswal ಸ್ಫೋಟಕ ಸೆಂಚುರಿ
ಇಷ್ಟಕ್ಕೂ ಡಿಕೆ ಶಿವಕುಮಾರ್ ಹೇಳಿದ್ದೇನು?
ಅಪಾರ್ಟ್ಮೆಂಟ್ ನಿವಾಸಿಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್ಗೆ ಮತ ಹಾಕಿಲ್ಲ ಎಂಬುದನ್ನು ಉಲ್ಲೇಖಿಸಿದ ಡಿಕೆ ಶಿವಕುಮಾರ್,
ಜಿಬಿಎ (GBA) ಚುನಾವಣೆಗಳ ನೆಪದಲ್ಲಿ ಸರ್ಕಾರವನ್ನು ಹೆದರಿಸುವ ಪ್ರಯತ್ನ ಬೇಡ ಎಂದು ಪತ್ರ ಬರೆದವರನ್ನು ತರಾಟೆಗೆ ತೆಗೆದುಕೊಂಡಿದ್ದರು.
“ನಾನು ಮನೆ ಖರೀದಿದಾರರ ಪರ ನಿಲ್ಲುತ್ತಿದ್ದೇನೆ. ನಿಮ್ಮ ನೋವು ಅರ್ಥವಾಗುತ್ತದೆ. ಆದರೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ನಿಮ್ಮ ಬೆಂಬಲ ನಿರೀಕ್ಷಿಸುತ್ತೇನೆ”
ಎಂದು ಡಿಸಿಎಂ ಸೂಚ್ಯವಾಗಿ ಹೇಳಿದ್ದಾರೆ.
“ನಾನು ಜೈಲಿಗೂ ಹೋಗಿ ಬಂದವನು” – ಡಿಕೆಶಿ ಗುಡುಗು
ಸಭೆಯಲ್ಲಿ ಕಿರಣ್ ಹೆಬ್ಬಾರ್ ಎಂಬುವವರ ಪತ್ರದ ಧಾಟಿಗೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್,
“ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೂ ಹೆದರದೆ ಜೈಲಿಗೆ ಹೋಗಿ ಬಂದವನು ನಾನು. ಕಿರಣ್ ಹೆಬ್ಬಾರ್ ಅವರಂತಹವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಪ್ರೀತಿಯಿಂದ ಮಾತನಾಡಿಸಿದರೆ ಪ್ರೀತಿಯಿಂದಲೇ ಮಾತನಾಡಿಸುವೆ”
ಎಂದು ಕಿಡಿಕಾರಿದ್ದರು.
ಇದನ್ನು ನೋಡಿ : TUMAKURU ಪಾಲಿಕೆಯಲ್ಲಿ E-KHATA ಗೊಂದಲ – ಅಧಿಕಾರಿಗಳ ವಿರುದ್ಧJYOTHI GANESH ಗರಂ




