Raichur : ಮಕ್ಕಳ ಅಶ್ಲೀಲ ವಿಡಿಯೋ ಅತಿಯಾಗಿ ವೀಕ್ಷಣೆ : ರಾಯಚೂರಿನ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಕೇಸ್.

ಅತಿಯಾಗಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಆರೋಪದಡಿ Raichur ಪೊಲೀಸ್ ಇಲಾಖೆ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ Cyber Crime ಪ್ರಕರಣ ದಾಖಲಿಸಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಯುವಕ ಹಗಲು ರಾತ್ರಿ ಎನ್ನದೇ ವೆಬ್ಸೈಟ್ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ. ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಬಳಿಕ ಯುವಕ ಮೊಬೈಲ್ ವಿಡಿಯೋ ವೀಕ್ಷಣೆ ಮಾಡಿದ History ಯನ್ನು ಡೀಲೀಟ್ ಮಾಡುತ್ತಿದ್ದ. ಆದರೇ, ಅಶ್ಲೀಲ ವೆಬ್ ಸೈಟ್ ನಲ್ಲಿ ಯುವಕ ವಿಡಿಯೋ ನೋಡಿದ ದಾಖಲೆ ರೆಕಾರ್ಡ್ ಆಗಿತ್ತು.
ಇದನ್ನು ಓದಿ : ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ಶಿರಾ ನಗರದ ಜನ
ಈ ಪ್ರಕರಣವು ಚೈಲ್ಡ್ ಸೆಕ್ಸ್ಯುಯಲ್ ಅಬ್ಯೂಸ್ ಮಟೀರಿಯಲ್ ಆ್ಯಕ್ಟ್ (Child Sexual Abuse Material Act) ಅಡಿಯಲ್ಲಿ ದಾಖಲಾಗಿದೆ. ಈ ಕಾನೂನಿನ ಪ್ರಕಾರ, ಮಕ್ಕಳ ಅಶ್ಲೀಲ ವೀಡಿಯೊ ವೀಕ್ಷಣೆಯು ಅಪರಾಧವಾಗಿದ್ದು, ಸಾಬೀತಾದರೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.
ರಾಯಚೂರು ಪೊಲೀಸ್ ಇಲಾಖೆ ತಿಳಿಸಿರುವಂತೆ, ಈ ಪ್ರಕರಣದ ಹಿನ್ನೆಲೆ ಯುವಕನ ಮೊಬೈಲ್ನಲ್ಲಿ ಲಿಂಕ್ ಆಗಿರುವ ಸಂಖ್ಯೆಗಳು ಮತ್ತು ಇಮೇಲ್ ಐ.ಡಿ. ಮೂಲಕ ಹೆಚ್ಚಿನ ವೀಡಿಯೊ ವೀಕ್ಷಣೆ ಪತ್ತೆ ಹಚ್ಚಲಾಗಿದೆ. ದಾಖಲೆಗಳ ಪ್ರಕಾರ, ಯುವಕ 32 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಇದನ್ನು ನೋಡಿ : ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸ್ತಿದೆ DEVIL – 2ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?




