Goa Nightclub Fire : 25 ಮಂದಿ ಸಾವು ಸಂಭವಿಸಿದ ಗೋವಾ ನೈಟ್ಕ್ಲಬ್ ಬೆಂಕಿ ದುರಂತ ಪ್ರಕರಣದಲ್ಲಿ ಸಹ-ಮಾಲೀಕ ಅಜಯ್ ಗುಪ್ತಾ ಬಂಧನ.

Goa Nightclub Fire : 25 ಜನರ ಸಾವಿಗೆ ಕಾರಣವಾದ ಭೀಕರ ದುರಂತದ
ಗೋವಾ ನೈಟ್ಕ್ಲಬ್ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ 25 ಮಂದಿ ಮೃತಪಟ್ಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೈಟ್ಕ್ಲಬ್ನ ನಾಲ್ವರು ಮಾಲೀಕರ ಪೈಕಿ ಒಬ್ಬರಾದ ಅಜಯ್ ಗುಪ್ತಾ ಬಂಧನಕ್ಕೆ ಒಳಗಾಗಿದ್ದಾರೆ.
ಬೆನ್ನುನೋವು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಗುಪ್ತಾ ಲಾಕ್
ಅಜಯ್ ಗುಪ್ತಾ ತಮ್ಮನ್ನು ಬಂಧಿಸದಂತೆ ‘ಬೆನ್ನುನೋವು’ ಎಂದು ಸುಳ್ಳು ಹೇಳಿ ದೆಹಲಿಯ ಲಜಪತ್ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
3–4 ದಿನ ಆಸ್ಪತ್ರೆಯಲ್ಲಿ ಉಳಿದು ಪಾರಾಗುವ ಪ್ಲ್ಯಾನ್ ಮಾಡಿದರೂ, ಪೊಲೀಸರ ಜಾಲದಲ್ಲಿ ಸಿಲುಕಿದರು.ಲುಕ್ಔಟ್ ನೋಟಿಸ್ ಹೊರಡಿಸಲಾಗುತ್ತಿದ್ದಂತೆಯೇ ಅವರನ್ನು ಗೋವಾ ಪೊಲೀಸರು ವಶಕ್ಕೆ ಪಡೆದುಕೊಂಡರು.
ಉತ್ತರ ಗೋವಾದ ‘ಬಿರ್ಚ್ ಬೈ ರೋಮಿಯೋ ಲೇನ್’ ಎಂಬ ನೈಟ್ಕ್ಲಬ್ನಲ್ಲಿ ಬೆಂಕಿ ಅವಘಡ ಸಂಭವಿಸಿದ ನಂತರಅಜಯ್ ಗುಪ್ತಾ, ಮತ್ತು ಸಹೋದರರಾದ ಸೌರಭ್ ಲೂಥ್ರಾ – ಗೌರವ್ ಲೂಥ್ರಾ ಸಂಕಷ್ಟಕ್ಕೆ ಸಿಲುಕಿದ್ದಾರೆ.ಗುಪ್ತಾ ಈ ನೈಟ್ಕ್ಲಬ್ನ ಸಹ-ಮಾಲೀಕರಲ್ಲಿ ಒಬ್ಬರು.ಬೆಂಕಿ ಘಟನೆಯ ನಂತರ, ಲೂಥ್ರಾ ದಂಪತಿ ಥೈಲ್ಯಾಂಡ್ನ ಫುಕೆಟ್ಗೆ ಪರಾರಿಯಾದ ಮಾಹಿತಿ ದೊರೆತಿದ್ದು, ಅವರನ್ನು ಮರಳಿ ಭಾರತದತ್ತ ಕರೆತರಲು ಪ್ರಯತ್ನಗಳು ಜೋರಾಗಿವೆ.
ಅಜಯ್ ಗುಪ್ತಾ ಆಸ್ಪತ್ರೆಯಲ್ಲಿ ಇದ್ದಾವರೇ ದೇಹಲಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಿ ಪ್ಲ್ಯಾನ್ ಅನ್ನು ಸಂಪೂರ್ಣವಾಗಿ ವಿಫಲಗೊಳಿಸಿದ್ದಾರೆ.ಪೊಲೀಸರು ಅವರನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಗೋವಾ ಪೊಲೀಸರ ಮುಂದಿನ ಹೆಜ್ಜೆಗಳು
ಗೋವಾ ಪೊಲೀಸರು, ಬಂಧನ ನಂತರ ಅಜಯ್ ಗುಪ್ತರನ್ನು ಗೋವಾಕ್ಕೆ ಕರೆದೊಯ್ಯುವ ಕಾರ್ಯಾಚರಣೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಇದೇ ವೇಳೆ, ಬೆಂಕಿ ದುರಂತಕ್ಕೆ ಕಾರಣವಾದ ನಿರ್ಲಕ್ಷ್ಯ, ಸುರಕ್ಷತಾ ನಿಯಮ ಉಲ್ಲಂಘನೆ ಮತ್ತು ಮಾಲೀಕರ ಹೊಣೆಗಾರಿಕೆ ಕುರಿತಾಗಿ
ತನಿಖೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಇದನ್ನು ನೋಡಿ : ಕೊ*ಲೆ ಮಾಡಿ SELFI VIDEO ಮಾಡಿದ ಕಿರಾತಕರು- ಗಾಂಜಾ ನಶೆಯಲ್ಲಿ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ




