Bellary News : ಆ್ಯಪ್ಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು, ವರ್ಕ್ ಫ್ರಮ್ ಹೋಮ್ ಕೆಲಸ ಕೊಡಿಸುವುದಾಗಿ ನಂಬಿಸಿ, ಫೋಟೋ ಪಡೆದು ಅದನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ.

Bellary News : Work From Home ಆಮಿಷಕ್ಕೆ ಬಲಿಯಾದ ಯುವತಿ
ಆ್ಯಪ್ಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು, ವರ್ಕ್ ಫ್ರಮ್ ಹೋಮ್ ಕೆಲಸ ಕೊಡಿಸುವುದಾಗಿ ನಂಬಿಸಿ, ಫೋಟೋ ಪಡೆದು ಅದನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ.
ಯುವತಿಯೊಬ್ಬರ ದೂರು ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದಲ್ಲಿ ಬಳ್ಳಾರಿ ಮೂಲದ ಯುವಕನನ್ನು ಅರೆಸ್ಟ್ ಮಾಡಿದ್ದಾರೆ.
ಆ್ಯಪ್ಗಳ ಮೂಲಕ ಪರಿಚಯ, ನಂತರ ಬ್ಲ್ಯಾಕ್ಮೇಲ್
ಬಳ್ಳಾರಿಯ ಶಿವಶಂಕರ್ ಎಂಬಾತ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಿದ್ದು, ಕೊರಿಯರ್ ಹಾಗೂ ಓಲಾ ಬೈಕ್ ಚಾಲಕನಾಗಿದ್ದಾನೆ.
ಆ್ಯಪ್ಗಳ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ‘ವರ್ಕ್ ಫ್ರಮ್ ಹೋಮ್ ಕೆಲಸ ಕೊಡಿಸುತ್ತೇನೆ’ ಎಂದು ನಂಬಿಸಿ ಅವರಿಂದ ಫೋಟೋ ಹಾಗೂ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ.
ಪಡೆದ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಯುವತಿಯರ ಪರಿಚಯಸ್ಥರಿಗೆ ಕಳುಹಿಸಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಆ್ಯಶಸ್ ಸರಣಿಯಿಂದ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಔಟ್
ಕಗ್ಗಲಿಪುರ ಯುವತಿ ನೀಡಿದ ದೂರು
ಕಗ್ಗಲಿಪುರ ಮೂಲದ ಯುವತಿ ಕೆಲ ದಿನಗಳ ಹಿಂದೆ ಶಿವಶಂಕರ್ನ್ನು ಆ್ಯಪ್ ಮೂಲಕ ಪರಿಚಯಿಸಿಕೊಂಡಿದ್ದರು. ಕೆಲಸದ ಹೆಸರಿನಲ್ಲಿ 500 ರೂ. ಹಾಗೂ ಕೆಲವು ದಾಖಲೆಗಳನ್ನು ಕಳುಹಿಸಿದ ಯುವತಿಯ ಫೋಟೋವನ್ನು ಆರೋಪಿ ಅಶ್ಲೀಲವಾಗಿ ಎಡಿಟ್ ಮಾಡಿ ಕಿರುಕುಳ ನೀಡಲಾರಂಭಿಸಿದ. ಇದರಿಂದ ನೊಂದ ಯುವತಿ ಕಗ್ಗಲಿಪುರ ಠಾಣೆಗೆ ದೂರು ನೀಡಿದ್ದು, ನಂತರ ಪೊಲೀಸರು ಆರೋಪಿ ಶಿವಶಂಕರ್ ಅನ್ನು ಬಂಧಿಸಿದ್ದಾರೆ.
ಇನ್ನೂ ಹಲವು ಯುವತಿಯರಿಗೆ ಕಿರುಕುಳ
ತನಿಖೆಯಲ್ಲಿ ಶಿವಶಂಕರ್ ಇದೇ ವಿಧಾನದಲ್ಲಿ ಹಲವು ಯುವತಿಯರನ್ನು ಬಲೆಗೆ ಸೆಳೆದು ಕಿರುಕುಳ ನೀಡಿದ್ದಾನೆ ಎಂಬುದು ಪತ್ತೆಯಾಗಿದ್ದು, ಇಂತಹ ಮೋಸಗಾರರಿಂದ ಎಚ್ಚರಿಕೆಯಿಂದಿರಲು ಪೊಲೀಸರು ಮಹಿಳೆಯರಿಗೆ ಸೂಚನೆ ನೀಡಿದ್ದಾರೆ.
ಯುವತಿಯರ ವಿಶ್ವಾಸ ದುರುಪಯೋಗಪಡಿಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದು ಜೈಲಿನ ಅತಿಥಿಯಾಗಿದ್ದಾನೆ.
ಇದನ್ನು ನೋಡಿ : CM Letter|ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ! ಯಾಕೆ




