ದ್ವಿತೀಯ PUC ವಿದ್ಯಾರ್ಥಿಗಳಿಗೆ ಬಿಗ್ ಶಾಕಿಂಗ್ ನ್ಯೂಸ್; ಇನ್ಮುಂದೆ ರಜೆ ಇರಲ್ಲ, ಕಾಲೇಜಿಗೆ ಬಂದು ಓದ್ಬೇಕು!

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ (PUC) ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಉದ್ದೇಶದಿಂದ ದೊಡ್ಡ ಕ್ರಮ ಕೈಗೊಂಡಿದೆ. ಈ ನಿಯಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಹಿಂದೆ ನೀಡುತ್ತಿದ್ದ ಸ್ಟಡಿ ಹಾಲಿಡೇಗಳನ್ನು ರದ್ದುಪಡಿಸಿ, ಕಾಲೇಜುಗಳಲ್ಲಿ ಕಡ್ಡಾಯ ಗ್ರೂಪ್ ಸ್ಟಡಿ ನಡೆಸುವಂತೆ ಆದೇಶ ಹೊರಡಿಸಲಾಗಿದೆ.
ಗ್ರೂಪ್ ಸ್ಟಡಿ
ಹೊಸ ಕ್ರಮದಂತೆ, ಪಿಯುಸಿ ಮುಖ್ಯ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಪ್ರತಿದಿನ ಕಾಲೇಜಿಗೆ ಹಾಜರಾಗಬೇಕು. ಕಾಲೇಜಿನಲ್ಲಿ ಉಪನ್ಯಾಸಕರ ಮೇಲ್ವಿಚಾರಣೆಯಲ್ಲಿ ಪರೀಕ್ಷಾ ತಯಾರಿ ನಡೆಸುವುದು ಕಡ್ಡಾಯವಾಗಿದ್ದು, ಕ್ಲಾಸ್ ರೂಮ್ನಲ್ಲಿಯೇ ಒಟ್ಟಿಗೆ ಕುಳಿತು ಓದಬೇಕು.
ಇದನ್ನು ಓದಿ : ಚಿನ್ನಸ್ವಾಮಿ ಕ್ರಿಕೆಟ್ ಅಂಗಳದಲ್ಲೇ IPL 2026 ಉದ್ಘಾಟನೆ?
ಶಿಕ್ಷಕರು ಕಾಲೇಜಿಗೆ ಹಾಜರಾಗಬೇಕು
ಶಿಕ್ಷಕರಿಗೆ ವಿದ್ಯಾರ್ಥಿಗಳ ಯಾವುದೇ ಪ್ರಶ್ನೆಗಳಿಗೆ ತಕ್ಷಣ ಸ್ಪಷ್ಟನೆ ನೀಡುವ ಜವಾಬ್ದಾರಿ ನೀಡಲಾಗಿದೆ. ಈ ನಿಯಮದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲಿದೆ ಎಂಬುದು ಇಲಾಖೆಯ ಅಭಿಪ್ರಾಯ. ಹೀಗಾಗಿ, ಶಿಕ್ಷಕರೂ ಮುಖ್ಯ ಪರೀಕ್ಷೆ ಮುಗಿಯುವವರೆಗೂ ಪ್ರತಿದಿನ ಕಾಲೇಜಿಗೆ ಹಾಜರಾಗಬೇಕು.
‘ನೋ ಸ್ಟಡಿ ಹಾಲಿಡೇ’
ಇತ್ತೀಚೆಗೆ, ಪಠ್ಯ ಪೂರ್ಣಗೊಂಡು ಪೂರ್ವಸಿದ್ಧತಾ ಪರೀಕ್ಷೆಗಳ ನಂತರ ನೀಡುತ್ತಿದ್ದ ಸುಮಾರು ಒಂದು ತಿಂಗಳ ಸ್ಟಡಿ ಹಾಲಿಡೇಗಳನ್ನು ಈ ಬಾರಿ ‘ನೋ ಸ್ಟಡಿ ಹಾಲಿಡೇ’ ನೀತಿಯಡಿಯಲ್ಲಿ ರದ್ದುಪಡಿಸಲಾಗಿದೆ. ಫೆಬ್ರವರಿ 26ರವರೆಗೆ ಎಲ್ಲಾ ಪಿಯು ಕಾಲೇಜುಗಳು ತೆರೆದಿರಬೇಕು ಎಂದು ಆದೇಶಿಸಲಾಗಿದೆ.
ಪರ-ವಿರೋಧ ಚರ್ಚೆ
ರಜೆ ನೀಡಿದರೆ ವಿದ್ಯಾರ್ಥಿಗಳು ಓದುವುದಕ್ಕಿಂತ ಬೇರೆ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬ ಕಾರಣ ನೀಡಿ, ಕಾಲೇಜಿಗೆ ಕರೆಸಿ ಅಧ್ಯಯನಕ್ಕೆ ಒತ್ತಾಯಿಸಲು ಇಲಾಖೆ ಮುಂದಾಗಿದೆ. ಆದರೆ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಸ್ವತಂತ್ರ ಅಭ್ಯಾಸಕ್ಕೆ ತೊಂದರೆಯಾಗಬಹುದು ಎಂಬ ಪರ-ವಿರೋಧ ಚರ್ಚೆ ಕೂಡ ಆರಂಭವಾಗಿದೆ.
ಇದನ್ನು ನೋಡಿ : ರಾಷ್ಟ್ರಗೀತೆಗೆ ಅಪಮಾನ ಆರೋಪ; ವಿಧಾನಸಭೆಯಿಂದ ಹೊರನಡೆದ ರಾಜ್ಯಪಾಲ




