ಮೇ 15ರಂದು DK Shivakumar ಹುಟ್ಟುಹಬ್ಬದಂದು ಮಹತ್ವದ ಘೋಷಣೆ ಆಗಬಹುದೆಂಬ ಚರ್ಚೆ ಜೋರಾಗಿದೆ.

DK Shivakumar ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್ಗಳು ಇದೀಗ ವೈರಲ್ ಆಗಿವೆ. “DK Shivakumar Serving Karnataka” ಎಂಬ ಫೇಸ್ಬುಕ್ ಪೇಜ್ನಲ್ಲಿ ಮೇ 15ರಂದು ಸಂಜೆ 5 ಗಂಟೆಗೆ ದೊಡ್ಡ ಘೋಷಣೆ ಆಗಲಿದೆ ಎಂದು ಪೋಸ್ಟ್ ಮಾಡಲಾಗಿದೆ.
“ಸಿದ್ಧರಾಗಿ” ಪೋಸ್ಟ್ ಸೃಷ್ಟಿಸಿದ ಕುತೂಹಲ
ವಿಡಿಯೋ ಮೂಲಕ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ,
“ಸಿದ್ಧರಾಗಿ… ಒಂದು ಭವ್ಯ ಸಂಭ್ರಮ ಆರಂಭವಾಗ್ತಿದೆ”
ಎಂದು ಉಲ್ಲೇಖಿಸಲಾಗಿದೆ.
ಇದಲ್ಲದೆ, “ಇದು ಒಂದು ಕ್ಷಣ, ಒಂದು ಘೋಷಣೆ, ಅಂತ್ಯವಿಲ್ಲದ ಉತ್ಸಾಹ” ಎಂಬ ಸಾಲುಗಳು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆಶಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.
MUST READ : Dina Bhavishya : ದಿನ ಭವಿಷ್ಯ 9 ಮೇ 2026..

ಡಿಕೆ ಶಿವಕುಮಾರ್ ಸಿಎಂ ಪಟ್ಟ ಫಿಕ್ಸ್ ಆಗುತ್ತಾ?
ಈ ಪೋಸ್ಟ್ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕುರಿತು ಮತ್ತೆ ಚರ್ಚೆ ಗರಿಗೆದರಿದೆ. ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಘೋಷಣೆ ಆಗಬಹುದೇ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ಆದರೆ, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಥವಾ ಡಿಕೆ ಶಿವಕುಮಾರ್ ಅವರಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಿದ ನಿರೀಕ್ಷೆ
ಅಧಿಕೃತ ಘೋಷಣೆ ಇಲ್ಲದಿದ್ದರೂ, ಡಿಕೆಶಿ ಅಭಿಮಾನಿಗಳು ಮೇ 15ರ ಕಾರ್ಯಕ್ರಮದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಕೌಂಟ್ಡೌನ್ ಆರಂಭವಾಗಿದ್ದು, ಡಿಕೆ ಶಿವಕುಮಾರ್ ಅಭಿಮಾನಿಗಳು ದೊಡ್ಡ ರಾಜಕೀಯ ಬೆಳವಣಿಗೆಯ ನಿರೀಕ್ಷೆಯಲ್ಲಿ ಇದ್ದಾರೆ.
MUST WATCH : ಸರ್ಕಾರಿ ವೈದ್ಯರ ವಿರುದ್ಧ ಅಪಪ್ರಚಾರ – ಗ್ರಾಮಸ್ಥರಿಂದ ವೈದ್ಯರ ಪರ ಪ್ರತಿಭಟನೆ..! | MADHUGIRI NEWS |




