Yadagiri ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

Yadagiri : ಮೃತ ವ್ಯಕ್ತಿಯನ್ನು ಸಿದ್ದಪ್ಪ ಕೊಂಡಗುಳಿ ಎಂದು ಗುರುತಿಸಲಾಗಿದೆ. ದಿನದ ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ನಂತರ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಿಸಿಲಿನ ತೀವ್ರತೆಗೆ ಒಳಗಾದ ಕಾರಣ ಆರೋಗ್ಯ ಹದಗೆಟ್ಟಿರುವ ಸಾಧ್ಯತೆ ಇದೆ.
MUST READ : ಗ್ಯಾಸ್ ಬೆಲೆ ಏರಿಕೆ ಕುರಿತು DK Shivakumar ಆಕ್ರೋಶ..!!
ಘಟನೆ ನಡೆದ ದಿನ ಸಿದ್ದಪ್ಪ ಕೂಲಿ ಕೆಲಸಕ್ಕೆ ತೆರಳಿದ್ದರು. ಹೆಚ್ಚಿದ ಬಿಸಿಲಿನ ತಾಪದಿಂದ ಮನೆಗೆ ಮರಳಿದ ಅವರು, ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಚಿಕಿತ್ಸೆ ದೊರೆಯದೇ ಪ್ರಾಣ ಕಳೆದುಕೊಂಡಿದ್ದಾರೆ.
ಸಿದ್ದಪ್ಪ ಕುಟುಂಬವು ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದು, ಅವರ ಸಾವಿನಿಂದ ಕುಟುಂಬಕ್ಕೆ ಭಾರೀ ಆಘಾತವಾಗಿದೆ. ಕುಟುಂಬದ ಮುಖ್ಯ ಆಧಾರವಾಗಿದ್ದ ಅವರು ಇಲ್ಲದ ಕಾರಣ ಸಂಕಷ್ಟ ಹೆಚ್ಚಾಗಿದೆ.
MUST WATCH : ಕಲ್ಯಾಣಿಯಲ್ಲಿ ಮೀನುಗಳ ಮಾರಣಹೋಮ – ಕಲುಷಿತ ನೀರಿಂದ ಮೀನುಗಳು ಸಾವನ್ನಪ್ಪಿದ್ವಾ.? | CHIKKABALLAPURA NEWS |




