ಕೊಡಗು: ಕಾಫಿ ಕೊಯ್ಲು ಮಾಡುವಾಗ, ಹೆಜ್ಜೇನು ದಾಳಿಯಿಂದ ಯುವಕ ಸಾವು..!

ಮೃತ ಯುವಕ ಹೆಚ್.ಸಿ. ಲೋಹಿತ್‌ (32)
ಮೃತ ಯುವಕ ಹೆಚ್.ಸಿ. ಲೋಹಿತ್‌ (32)
ಕೊಡಗು

ಕೊಡಗು:

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗಲೇ ಹೆಜ್ಜೇನು ದಾಳಿಯಿಂದ ಯುವಕ ಸಾವನ್ನಪ್ಪಿರುವ ಘಟನೆ ಶಿವರಾತ್ರಿ ದಿನದಂದೇ ಕೊಡಗು ಜಿಲ್ಲೆಯ ಪೋದ್ದಮಾನಿ ಗ್ರಾಮದಲ್ಲಿ ನಡೆದಿದೆ.

ಹೆಜ್ಜೇನು ದಾಳಿಗೆ ಹೆಚ್.ಸಿ ಲೋಹಿತ್‌ (32) ಎನ್ನುವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಪೋದ್ದಮಾನಿ ಗ್ರಾಮದ ಬಳಿ ಕಾಫಿ ಕೊಯ್ಯುವ ಸಂದರ್ಭದಲ್ಲಿ ಹೆಜ್ಜೇನು ದಾಳಿಯಿಂದ ಈ ದುರಂತ ಸಂಭವಿಸಿದೆ, ಸೋಮವಾರದಿಂದ ಕಾಣೆಯಾಗಿದ್ದು ಹುಡುಕಾಟ ನಡೆಸಿದ್ದಾರೆ, ಮಂಗಳವಾರ ಮುಂಜಾನೆ ಕುಟುಂಬದವರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆಯಲ್ಲಿ ಕಾಫಿ ತೋಟದಲ್ಲಿ ಇತನ ಮೃತದೇಹ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Author:

share
No Reviews