ಕ್ರಿಕೆಟ್ :
ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ನಿತ್ಯ ಒಂದಿಲ್ಲೊಂದು ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಾನೆ ಇರ್ತಾರೆ. ಫೀಲ್ಡ್ ಆಗ್ಲಿ, ಸ್ಟೇಜ್ ಆಗ್ಲಿ, ಸೋಷಿಯಲ್ ಮೀಡಿಯಾದಲ್ಲಾಗ್ಲಿ ಇವರದ್ದೆ ಕಾರುಬಾರು.
ಇನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಟಿ ಅವನೀತ್ ಕೌರ ಅವರ ಫ್ಯಾನ್ ಪಾಲೋಯಿಂಗ್ ಪೇಜನ್ನು ಲೈಕ್ ಮಾಡುವ ಮೂಲಕ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ರು. ಇನ್ನು ಈ ವಿಷಯ ಆನ್ಲೈನ್ನಲ್ಲಿ ಎಲ್ಲರ ಗಮನ ಸೆಳೆದಿತ್ತು. ಇನ್ನು ವಿಚಾರದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನ ಅನಗತ್ಯವಾಗಿ ಟ್ಯಾಗ್ ಮಾಡಲಾಗಿತ್ತು.
ಈ ಸುದ್ದಿ ತಿಳಿತಿದ್ದಂತೆ ಕೊಹ್ಲಿ ಸ್ಪಷ್ಟನೆ ನೀಡಿದ್ರು. ಅಲ್ಗಾರಿದಮ್ ತಪ್ಪಿನಿಂದಾಗಿ ಅವನೀತ್ ಕೌರ್ ಅವರ ಫೋಟೋಗೆ ಲೈಕ್ ಒತ್ತಿರಬಹುದು. ಇದ್ರ ಹಿಂದೆ ಯಾವುದೇ ದುರುದ್ದೇಶವಿಲ್ಲ. ಇದನ್ನು ಅನಗತ್ಯ ಊಹಾಪೋಹ ಮಾಡದಂತೆ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ನೀವು ನನ್ನನ್ನು ಅರ್ಥ ಮಾಡಿಕೊಳ್ತಿರ ಎಂದು ಭಾವಿಸುತ್ತೇವೆ ಎಂದು ಧನ್ಯವಾದವನ್ನು ತಿಳಿಸಿದ್ದಾರೆ.