ಕೊರಟಗೆರೆ:
ಬೇಸಿಗೆ ಆರಂಭವಾಗಿದ್ದು, ಹಲವೆಡೆ ನೀರಿಗಾಗಿ ಹಾಹಾಕಾರ ಒಂದ್ಕಡೆ ಆದ್ರೆ, ಮತ್ತೊಂದ್ಕಡೆ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು ಕುಡಿಯಲೂ ಕೂಡ ಒಂದು ಹನಿ ಶುದ್ಧ ಜಲ ಸಿಗ್ತಾ ಇಲ್ಲ. ಹನಿ ನೀರಿಗಾಗಿ ಜನರಂಥೂ ಪರದಾಡುತ್ತಿದ್ದಾರೆ. ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಮೋರಗಾನಹಳ್ಳಿಯಲ್ಲಿರೋ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ 2 ವರ್ಷಗಳೇ ಕಳೆದ್ರು ಅಧಿಕಾರಿಗಳು ಮಾತ್ರ ಸರಿಪಡಿಸುವ ಕೆಲಸ ಮಾಡ್ತಾ ಇಲ್ಲ.
ಮೋರಗಾನಹಳ್ಳಿ ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಕುಟುಂಬಗಳಿವೆ. ಗ್ರಾಮಸ್ಥರು ಪ್ರತಿನಿತ್ಯ ಶುದ್ದ ಕುಡಿಯುವ ನೀರಿಗಾಗಿ ಊರೂರು ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ.ಇನ್ನೂ ಗ್ರಾಮದಲ್ಲಿನಸರಕಾರಿ ಪ್ರಾಥಮಿಕ ಪಾಠಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶುದ್ದ ಕುಡಿಯುವ ನೀರು ಸಿಗದೇ ಪರದಾಡುವಂತಾಗಿದೆ. ಇನ್ನು ಈ ಗ್ರಾಮದ ನಿವಾಸಿಗಳು ಕುಡಿಯುವ ನೀರಿಗಾಗಿ ಗೊರವನಹಳ್ಳಿ ಮತ್ತು ಅಳಾಲಸಂದ್ರದ ಸುಮಾರು 5ಕಿಲೋ ಮೀಟರ್ ದೂರದ ಊರಿಗೆ ಹೋಗಿ ನೀರು ಹಿಡಿದುಕೊಂಡ ಬರಬೇಕಿದೆ. ದೂರದ ಸಂಚಾರ ಮಾಡಲು ಆಗದೇ ಇರುವವರು ಪ್ಲೋರೈಡ್‌ಯುಕ್ತ ನೀರನ್ನೇ ಕುಡಿಯುತ್ತಿದ್ದಾರೆ.
ಈ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಸುಮಾರು 2 ವರ್ಷಗಳೇ ಆದ್ರು ಯಾವೊಬ್ಬ ಅಧಿಕಾರಿಯೂ ಕೂಡ ತಿರುಗಿಯೂ ನೋಡ್ತಾ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನಾದ್ರು ಅಧಿಕಾರಿಗಳು ಭೇಟಿ ನೀಡಿ, ಶುದ್ಧ ಕುಡಿಯುವ ಘಟಕವನ್ನುಸರಿಪಡಿಸ್ತಾರಾ ಇಲ್ವಾ ಎಂದು ಕಾದುನೋಡಬೇಕಿದೆ.