ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾಗಿದೆ. ಬೇಸಿಗೆಗಾಗಿ ರೈತರು ತಮ್ಮ ಜಾನುವಾರುಗಳಿಗಾಗಿ ಮೇವು ಸಂಗ್ರಹಿಸಿಟ್ಟಿದ್ದ 30 ಹುಲ್ಲಿನ ಬಣವೆಗಳು ಸುಟ್ಟು ಕರಕಲಾಗಿವೆ.
ರೈತರು ತಮ್ಮ ಜಾನುವಾರುಗಳಿಗೆ ಬೇಸಿಗೆಗಾಗಿ ಸುಮಾರು 30 ಬಣವೆಗಳನ್ನ ಸಂಗ್ರಹಿಸಿಟ್ಟಿದ್ದರು. ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ 30 ಮೇವಿನ ಬಣವೆಗಳು ಸುಟ್ಟು ಹೋಗಿವೆ. ಬಣವೆ ಇರುವ ಭಾಗದಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ್ದ ರೈತರು ಸ್ಥಳಕ್ಕೆ ಹೋಗುವಷ್ಟರಲ್ಲಿ ಎಲ್ಲಾ ಬಣವೆಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿದ್ದವು. ಕೂಡಲೇ ರೈತರು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದರು. ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಬರುವಷ್ಟರಲ್ಲಿ ಬಣವೆಗಳು ಹೊತ್ತಿ ಉರಿದಿದೆ.
ಗ್ರಾಮದ ರೈತರಾದ ರಫಿ, ಆನಂದ್, ನಾಗರಾಜು, ಮಂಜವ್ವ, ಖಾಜಾಶಾಬ್, ಕೊಟ್ರೇಶ, ಚಿನ್ನಾಸಾಬ್, ಟಿ.ಬಸವರಾಜ, ತಳಕಲ್, ಗನೂರು ನಾಗರಾಜಪ್ಪ ಸೇರಿ ಒಟ್ಟು ಹತ್ತು ಜನ ರೈತರಿಗೆ ಸೇರಿದ್ದ ಲಕ್ಷಾಂತರ ಬೆಲೆ ಬಾಳುವ ಮೆಕ್ಕೆಜೋಳದ ಸಿಪ್ಪೆ ಹಾಗೂ ಭತ್ತದ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಇಟ್ಟಿಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.