HEALTH TIPS : ತುಳಸಿ ಎಲೆಯ ಉಪಯೋಗ ಮತ್ತು ಆರೋಗ್ಯಕರ ಪ್ರಯೋಜನಗಳು

HEALTH TIPS : ತುಳಸಿಯು ತನ್ನ ವ್ಯಾಪಕವಾದ ಚಿಕಿತ್ಸಕ ಗುಣಗಳಿಗೆ ಹೆಸರುವಾಸಿಯಾದ ಜನಪ್ರಿಯ ಸಸ್ಯವಾಗಿದೆ. ಇದು ಒಸಿಮಮ್ ಕುಲಕ್ಕೆ ಸೇರಿದ್ದು ಮತ್ತು ಹಲವಾರು ಪ್ರಯೋಜನಗಳನ್ನು ಹೊಂದಿದೆ. 

*ತಣಿವು, ಶೀತ, ಜ್ವರಕ್ಕೆ ಲಾಭಕಾರಿ
ತುಳಸಿ ಎಲೆಗಳನ್ನು ಕಷಾಯವಾಗಿ ಕುಡಿಯುವದು ಜ್ವರ, ಶೀತ, ಕೆಮ್ಮು ಕಡಿಮೆಯಾಗಲು ಸಹಕಾರಿಯಾಗಿದೆ.

*ಶ್ವಾಸಕೋಶ ಆರೋಗ್ಯಕ್ಕೆ ಉತ್ತಮ
ತುಳಸಿಯಲ್ಲಿ ಇರುವ ಆ್ಯಂಟಿ-ಆಕ್ಸಿಡೆಂಟ್ ಗುಣಗಳು ಶ್ವಾಸಕೋಶದ ಶುದ್ಧಿಕರಣಕ್ಕೆ ಸಹಾಯಕವಾಗುತ್ತವೆ.

*ಹಲ್ಲು ಮತ್ತು ಬಾಯಾರೋಗ್ಯ
ತುಳಸಿ ಎಲೆಗಳ ಪೇಸ್ಟ್ ಹಲ್ಲು ನೋವು, ಬಾಯಿಯ ದುರ್ವಾಸನೆ, ಲಾಭಕಾರಿ.

*ಆತ್ಮಶಕ್ತಿ ಮತ್ತು ಮನಶಾಂತಿಗೆ ಸಹಕಾರಿ
ತುಳಸಿ ಧೂಪ ಅಥವಾ ಸಸ್ಯವನ್ನು ಮನೆ ಬಳಿ ಇಡುವುದರಿಂದ ಮನಶಾಂತಿ ಹಾಗೂ ಶುದ್ಧ ವಾತಾವರಣ ದೊರಕುತ್ತದೆ.

*ಜೀರ್ಣಕ್ರಿಯೆ ಸುಧಾರಣೆ
ತುಳಸಿ ಎಲೆಗಳನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ, ಮತ್ತು ಹೊಟ್ಟೆ ಸಂಬಂಧಿತ ತೊಂದರೆಗಳು ನಿವಾರಣೆಯಾಗುತ್ತವೆ.

*ಆ್ಯಂಟಿ-ಬ್ಯಾಕ್ಟೀರಿಯಲ್ ಗುಣಗಳು
ತುಳಸಿಯಲ್ಲಿ ಬ್ಯಾಕ್ಟೀರಿಯಾ ನಾಶ ಮಾಡುವ ಶಕ್ತಿ ಇದ್ದು, ಚರ್ಮದ ಸಮಸ್ಯೆಗಳಿಗೆ ಮದ್ದುಯಾಗುತ್ತದೆ.

*ಆಂಟಿ-ಡೈಬಿಟಿಕ್ ಗುಣ
ನಿಯಮಿತವಾಗಿ ತುಳಸಿ ಎಲೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

*ಚರ್ಮ ಮತ್ತು ಕೂದಲು ಆರೋಗ್ಯ
ತುಳಸಿ ಎಲೆಗಳ ರಸ ಚರ್ಮದ ಮೇಲೆ ಹಚ್ಚಿದರೆ ಮುಡಪು, ಮೊಡವೆ, ಸೂರ್ಯಕಿರಣದಿಂದ ಉಂಟಾಗುವ ತೊಡಕನ್ನು ನಿವಾರಿಸುತ್ತದೆ.

 

 

Author:

...
Keerthana J

Copy Editor

prajashakthi tv

share
No Reviews