BUEATY TIPS : ಮನೆ ಮದ್ದನ್ನು ಯೂಸ್ ಮಾಡಿ ಸನ್ ಟ್ಯಾನ್ ಶ್ವಾಶತವಾಗಿ ದೂರಮಾಡಿಕೊಳ್ಳಿ

ಸೂರ್ಯನ ತೀಕ್ಷ್ಣವಾದ ಕಿರಣಗಳು ಚರ್ಮವನ್ನು ಕಂದು ಬಣ್ಣವನ್ನಾಗಿಸುತ್ತದೆ. ಯು.ವಿ.ಎ ಕಿರಣಗಳು ಎಪಿಡರ್ಮಿಸ್‌ನ ಕೆಳಗಿನ ಪದರಗಳು ಮತ್ತು ಮೆಲನೋಸೈಟ್‌ ಎಂಬ ಜೀವಕೋಶಗಳನ್ನು ಪ್ರಚೋದಿಸುತ್ತವೆ. ಈ ಜೀವಕೋಶಗಳು ಮೆಲನಿನ್ ಅನ್ನು ಉತ್ಪತ್ತಿ ಮಾಡಿ, ಚರ್ಮದಲ್ಲಿ ಕಂದು ವರ್ಣದ್ರವ್ಯವನ್ನು ಉಂಟು ಮಾಡುತ್ತದೆ. ಕೊನೆಗೆ ಟ್ಯಾನಿಂಗ್ ಸಮಸ್ಯೆಯನ್ನುಂಟು ಮಾಡುತ್ತದೆ. ಟ್ಯಾನ್ ಸಮಸ್ಯೆಯನ್ನು ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು. ಮನೆಯಲ್ಲಿಯೇ ದೊರೆಯುವ ಕೆಲವು ಪದಾರ್ಥಗಳಿಂದ ಶಾಶ್ವತವಾಗಿ ಟ್ಯಾನ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

​* ಮೊಸರು ಮತ್ತು ಅರಿಶಿಣ

ಅರಿಶಿಣದಲ್ಲಿರುವ ಆಂಟಿ ಬ್ಯಾಕ್ಟಿರಿಯಲ್ ಗುಣವು ಅನೇಕ ಚರ್ಮ ಸಮಸ್ಯೆಗಳನ್ನು ಬಗೆಹರಿಸಲು ಶತಮಾನಗಳಿಂದ ಬಳಸಲಾಗುತ್ತಿದೆ.ಮೊಸರಿನಲ್ಲಿರುವ ಗುಣವು ಚರ್ಮದ ಕೊಳೆಯನ್ನು ತೊಡೆದು ಹಾಕಲು ಸಹಾಯ ಮಾಡುವುದಲ್ಲದೆ, ಮೃದುವಾಗಿಸುತ್ತದೆ.

ಒಂದು ಬೌಲ್‌ನಲ್ಲಿ ೨ ಚಮಚ ಅರಿಶಿಣಕ್ಕೆ ೪ ಚಮಚ ಮೊಸರನ್ನು ಸೇರಿಸಿ ಮಿಶ್ರಣವನ್ನು ತಯಾರು ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ತ್ವಚೆ, ಕೈ ಕಾಲುಗಳಿಗೆ ಲೇಪನ ಮಾಡಿ. ಸುಮಾರು ೨೦ ರಿಂದ ೩೦ ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಸನ್ ಟ್ಯಾನ್‌ನಿಂದ ಶಾಶ್ವತವಾಗಿ ಮುಕ್ತಿ ಹೊಂದಬಹುದು.

​*ನಿಂಬೆ ರಸ

ನಿಂಬೆ ರಸದಲ್ಲಿರುವ ವಿಟಮಿನ್ ಸಿ ಚರ್ಮದ ಕೋಶಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ. ಇದೊಂದು ಅದ್ಭುತವಾದ ಮನೆಮದ್ದಾಗಿದ್ದು, ಸನ್ ಟ್ಯಾನ್ ತೊಲಗಿಸಲು ಸಹಾಯ ಮಾಡುತ್ತದೆ.

ನಿಮ್ಮ ಕೈ ಮತ್ತು ಕಾಲುಗಳಿಗೆ ೨ ಹೋಳುಗಳಾಗಿ ಕತ್ತರಿಸಿದ ನಿಂಬೆಯನ್ನು ನಿಧಾನವಾಗಿ ಉಜ್ಜಿ. ೧೦ ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ.​

​*ಬಾದಾಮಿ

ಬಾದಾಮಿಯಲ್ಲಿ ವಿಟಮಿನ್ ಮತ್ತು ರಿಬೋಫ್ಲಾವಿನ್ ಸಮೃದ್ಧವಾಗಿದೆ. ಆರೋಗ್ಯಕರವಾದ ದೇಹ ಮತ್ತು ಸೌಂದರ್ಯ ಪಡೆಯಲು ಬಾದಾಮಿ ಸಾಕಷ್ಟು ಪ್ರಯೋಜನಕಾರಿಯಾಗಿದೆ.ಅಲ್ಲದೆ, ಇದು ಚರ್ಮವನ್ನು ಬಿಳುಪಾಗಿಸಿ, ಸನ್ ಟ್ಯಾನ್‌ನಿಂದ ಪಾರು ಮಾಡುತ್ತದೆ.

ಕೆಲವು ಬಾದಾಮಿಗಳನ್ನು ರಾತ್ರಿ ನೆನಸಿ. ಮರುದಿನ ಬಾದಾಮಿಯ ಬೀಜಗಳನ್ನು ಸಿಪ್ಪೆಯಿಂದ ಬೇರ್ಪಡಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಕೆಲವು ಹನಿಗಳು ಹಾಲನ್ನು ಬೆರಸಿ. ಈ ಮಿಶ್ರಣವನ್ನು ನಿಮ್ಮ ತ್ವಚೆ, ಕೈ ಮತ್ತು ಕಾಲಿಗೆ ಹಚ್ಚಿ. ಸುಮಾರು ೧೫ ರಿಂದ ೨೦ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

Author:

...
Sub Editor

ManyaSoft Admin

share
No Reviews