ತುಮಕೂರು :
ತುಮಕೂರು ಈಗಾಗಲೇ ಬೆಳೆಯುತ್ತಿರುವ ನಗರ. ಆದರೆ ಸ್ಮಾರ್ಟ್ ಸಿಟಿ ತುಮಕೂರು ವ್ಯಾಪ್ತಿಗೆ ಬರುವ ಈ ಬಡಾವಣೆಯಲ್ಲಿ ವಾಸಿಸುತ್ತಿರುವ ಜನರು ಪ್ರತಿನಿತ್ಯ ಗಬ್ಬು ವಾಸನೆ ಕುಡಿದುಕೊಂಡೆ ಬದುಕುವಂತ ಪರಿಸ್ಥಿತಿ, ಇಲ್ಲಿ ಸಂಚರಿಸುವ ಭಾರಿ ವಾಹನಗಳಿಂದ ರಸ್ತೆಯಲ್ಲಿ ಡ್ರೈನೆಜ್ ಹಾಳಾಗಿ ಗಬ್ಬೆದ್ದು ನಾರ್ತಿವೆ. ಅಲ್ಲದೇ ಪಕ್ಕದಲ್ಲಿರುವ ಶೆಡ್ನಿಂದ ಬರುತ್ತಿರುವ ಸೌಂಡ್ನಿಂದಾಗಿ ಜನ ಕಣ್ಣಿಗೆ ನಿದ್ರೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಕೂಡ ಡೋಂಟ್ ಕೇರ್ ಎನ್ನುತ್ತಿದ್ದಾರಂತೆ. ಸುಡುತ್ತಿರುವ ವೆಸ್ಟೇಜ್ನಿಂದ ಬರುತ್ತಿರುವ ಕಲ್ಮಶ ಗಾಳಿಯನ್ನು ಕುಡಿದು ಹಲವು ರೋಗಗಳಿಗೆ ಸ್ಥಳೀಯರು ತುತ್ತಾಗುತ್ತಿದ್ದಾರೆ.
ತುಮಕೂರು ನಗರದ ದಿಬ್ಬೂರಿನಲ್ಲಿ ವಾಸಿಸುತ್ತಿರುವ ಜನರು ಅಕ್ಷರಶಃ ಇಲ್ಲಿರುವ ಅವ್ಯವಸ್ಥೆಯಿಂದ ನಲುಗಿ ಹೋಗಿದ್ದಾರೆ. 7ನೇ ವಾರ್ಡ್ ದಿಬ್ಬೂರಿನಲ್ಲಿ ಶೆಡ್ಗಳನ್ನು ನಿರ್ಮಿಸಿಕೊಂಡು ವಾಹನಗಳ ಬಾಡಿ ಬಿಲ್ಡಿಂಗ್ ಕೆಲಸ ಮಾಡ್ತಿದ್ದಾರೆ. ಈ ಕಾರಣಕ್ಕೆ ಪ್ರತಿನಿತ್ಯ ಭಾರೀ ವಾಹನಗಳು ಈ ನಗರದಲ್ಲಿ ಒಳಭಾಗದಿಂದಲೇ ಆ ಶೆಡ್ ಇರುವ ಲೇಔಟ್ಗೆ ಹೋಗುತ್ತಿವೆ. ಇಂತಹ ಭಾರೀ ವೆಹಿಕಲ್ ಹಾವಳಿಯಿಂದಾಗಿ ಇರುವ 10 ಅಡಿ ರಸ್ತೆ ಕೂಡ ಹಾಳಾಗಿದ್ದು, ಪ್ರತಿನಿತ್ಯ ಬೆಳಗ್ಗೆ ಸಂಜೆ ಸಂಚರಿಸುವ ಗಾಡಿಗಳಿಂದಾಗಿ ಜನರಿಗೆ ಕಿರಿಕಿರಿ ಉಂಟಾಗುತ್ತಿದೆ.
ಈ ಬಡಾವಣೆಯ ಪಕ್ಕದಲ್ಲಿರುವ ಶೆಡ್ನಲ್ಲಿ ಒಂದು ಕಡೆ ಗಾಡಿಗಳಿಗೆ ಬಾಡಿ ಬಿಲ್ಡಿಂಗ್ ಕೆಲಸ ಮಾಡ್ತಿದ್ದರೆ, ಮತ್ತೊಂದು ಕಡೆ ಗುಟ್ಕ, ಪಾನ್ ಪರಾಗ್ ವೆಸ್ಟ್ ಕವರ್ಗಳನ್ನು ಇಲ್ಲಿಯೇ ತಂದು ಸುಡುತ್ತಿದ್ದಾರೆ. ಹೀಗಾಗಿ ಇಲ್ಲಿನ ಜನರು ಆ ಗಬ್ಬಿನ ಗಾಳಿಯನ್ನೇ ಕುಡಿದುಕೊಂಡು ಬದುಕುವಂತಾಗಿದೆ. ಇನ್ನು ಭಾರೀ ವಾಹನಗಳು ಹಗಲು ರಾತ್ರಿ ಎನ್ನದೆ ಮನೆಗಳ ಮುಂದೆಯೇ ಹೋಗುತ್ತಿರುವುದರಿಂದ ಮಕ್ಕಳು-ಮರಿಗಳು, ಹಿರಿಯರು ನಿದ್ರೆ ಮಾಡೋದು ಕಷ್ಟವಾಗಿದೆ. ಇತ್ತ ಗಾಡಿಗಳ ಬಾಡಿ ಬಿಲ್ಡಿಂಗ್ ಮಾಡುವ ಶೆಡ್ನಿಂದ ಬರುತ್ತಿರುವ ಹಾರನ್ ಸೌಂಡ್ನಿಂದ ಜನರು ಮಾತ್ರವಲ್ಲ ಶಬ್ದ ಮಾಲಿನ್ಯ ಕೂಡ ಆಗ್ತಿದೆ. ಇಲ್ಲಿ ನಮ್ಮ ಜೀವಗಳಿಗೆ ಬೆಲೆನೇ ಇಲ್ವಾ ಅಂತ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾವುದೇ ಒಂದು ವೆಸ್ಟೇಜ್ ಸುಡಬೇಕಾದರೂ ಅದು ಸಾರ್ವಜನಿಕ ವಲಯದಿಂದ ಬಹುದೂರವಿರಬೇಕು. ಆದರೆ ಇಲ್ಲಿ ಸುಡುತ್ತಿರುವ ಗುಟ್ಕ, ಪಾನ್ ಪರಾಗ್ ಕವರ್ ಗಳಿಂದಾಗಿ ಜನರ ಆರೋಗ್ಯ ಹದಗೆಡುತ್ತಿದೆ. ಇಲ್ಲಿ ವಾಸಿಸುವತ್ತಿರೋ ಜನರು ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಸಂಬಂಧ 2024ರಲ್ಲಿ ಜನರೆಲ್ಲ ಸೇರಿ ತಮ್ಮ ಸಮಸ್ಯೆಯನ್ನು ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಅಂತ ಗಂಭೀರ ಆರೋಪ ಮಾಡ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅನಧಿಕೃತವಾಗಿ ಈ ಶೆಡ್ ನಿರ್ಮಿಸಿದ್ದರೆ ಕಾನೂನು ಕ್ರಮಕ್ಕೆ ಮುಂದಾಗಬೇಕು. ಅಲ್ಲಿ ಸುಡುತ್ತಿರುವ ವೆಸ್ಟ್ ಗಳಿಂದ ಬರುತ್ತಿರುವ ದರ್ನಾತದ ಗಾಳಿಯಿಂದ ಜನರ ಪ್ರಾಣವನ್ನು ರಕ್ಷಿಸುವ ಕೆಲಸ ವಾಗಬೇಕಿದೆ.