TUMKUR - _ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ

ನಾಡಿನೆಲ್ಲೆಡೆ ಸಂಭ್ರಮ, ಸಡಗರದಿಂದ ಶಿವರಾತ್ರಿ ಹಬ್ಬವನ್ನು ಆಚರಿಸಲಾಗ್ತಿದೆ.. ಮುಂಜಾನೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡಿ ಭಕ್ತರು ಶಿವನ ದರ್ಶನ ಪಡೆಯುತ್ತಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರ ಮಾಡಲಾಗಿದೆ. ತುಮಕೂರಿನ ಚಿಕ್ಕಪೇಟೆಯಲ್ಲಿರೋ ಶ್ರೀ ಪ್ರಸನ್ನ ಗಂಗಾಧರೇಶ್ವರ ಸ್ವಾಮೀ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.. ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಶುರುವಾಗಿದ್ದು, ಮಹಾದೇವನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಇಷ್ಟ ಲಿಂಗಕ್ಕೆ ಅಭಿಷೇಕ,  ಮಂಗಳಾರತಿ ಮಾಡಲಾಯ್ತು. ಇನ್ನು ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಿವನ ದರ್ಶನ ಮಾಡಿದ್ರು. ರಾತ್ರಿ ಪೂರ್ತಿ ಭಜನೆ ಮೂಲಕ ಜಾಗರಣೆ ಮಾಡಲು ಭಕ್ತರಿಗೂ ಕೂಡ ಅವಕಾಶ ಕಲ್ಪಿಸಲಾಗಿದೆ.

:ಇನ್ನು ಗಂಗಾಧರೇಶ್ವರ ದೇವಾಲಯದ ಅರ್ಚಕರು ಮಾತನಾಡಿ ಈ ದೇಗುಲ 800 ವರ್ಷಗಳ ಪುರಾತನವಾದ ದೇಗುಲವಾಗಿದ್ದು, ಚೋಳರ ಕಾಲದಲ್ಲಿ ನಿರ್ಮಾಣವಾದ ದೇಗುಲ ಇದಾಗಿದೆ, ಈ ದೇವಾಲಯದಲ್ಲಿ ಪಂಚ ಲಿಂಗಗಳನ್ನು ಒಳಗೊಂಡಿದ್ದು, ಭಕ್ತಾದಿಗಳು ಇಲ್ಲಿಗೆ ಆಗಮಿಸ್ತಾರೆ.. ಇನ್ನು ದೇವಾಲಯದಲ್ಲಿ ವಿಶೇಷವೇನೆಂದರೆ, ಮದುವೆ ಆಗದ ಗಂಡು ಹೆಣ್ಣು ಮಕ್ಕಳು ಬಂದು ದೇವರಿಗೆ ಸಂಕಲ್ಪ ಮಾಡಿ ಪೂಜೆ ಮಾಡಿಸಿದರೆ ಕಂಕಣ ಭಾಗ್ಯ ಕೂಡಿ ಬರುತ್ತೆ ಎಂಬ ನಂಬಿಕೆ ಭಕ್ತರಲ್ಲಿದೆ ಎಂದ್ರು.

Author:

...
Editor

ManyaSoft Admin

Ads in Post
share
No Reviews