ತುಮಕೂರು : ಕೊಂಡೋತ್ಸವದ ವೇಳೆ ಭಾರೀ ಅವಘಡ | ದೇವಿ ಉತ್ಸವ ಮೂರ್ತಿ ಹೊತ್ತಿದ್ದ ಯುವಕರಿಗೆ ಗಾಯ

ತುಮಕೂರು:

ಫೆಬ್ರವರಿ, ಮಾರ್ಚ್‌ ತಿಂಗಳುಗಳಲ್ಲಿ ಬಹುತೇಕ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಜಾತ್ರೆ, ರಥೋತ್ಸವಗಳು ಜರುಗುತ್ತಲೇ ಇರುತ್ತೆ. ರಥೋತ್ಸವದ ಅಂಗವಾಗಿ ಕೊಂಡೋತ್ಸವ ನಡೆಸುವುದು ಹಲವೆಡೆ ವಾಡಿಕೆಯಾಗಿದೆ. ದೇವಿಗಳ ಜಾತ್ರೆ ವೇಳೆ ಕೊಂಡೋತ್ಸವ ನಡೆಸುವುದು ಸಾಮಾನ್ಯವಾಗಿದೆ. ತುಮಕೂರು ತಾಲೂಕಿನ ನೇರಳಾಪುರದ ಕೆಂಪಮ್ಮ ದೇವಸ್ಥಾನದಲ್ಲಿ ಕೊಂಡೋತ್ಸವ ಜರುಗಿದ್ದು ದುರಂತವೊಂದು ನಡೆದಿದೆ. ಹೌದು ಕೊಂಡೋತ್ಸವದ ವೇಳೆ ದೇವಿ ಉತ್ಸವ ಹೊತ್ತಿದ್ದ ಇಬ್ಬರು ಕೊಂಡಕ್ಕೆ ಬಿದ್ದಿರುವ ಘಟನೆ ಜರುಗಿದೆ.

ನೇರಳಾಪುರದ ಕೆಂಪಮ್ಮ ದೇವಸ್ಥಾನದಲ್ಲಿ ದೇವಿಯ ಉತ್ಸವ ಮೂರ್ತಿ ಹೊತ್ತಿದ್ದ ನವೀನ್‌ ಹಾಗೂ ದರ್ಶನ್‌ ಎಂಬುವವರು ಕೊಂಡಕ್ಕೆ ಬಿದ್ದಿದ್ದಾರೆ. ಕೊಂಡಕ್ಕೆ ಬಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ದೇವಾಲಯದ ಪಾವಿತ್ರ್ಯತೆ ಕಾಪಾಡದೇ ಇರೋದರಿಂದ ಈ ಆನಾಹುತ ಜರುಗಿದೆ, ಅಲ್ಲದೇ ಪದೇ ಪದೇ ದೇವಸ್ಥಾನದ ಹುಂಡಿ ಕಳ್ಳತನ ಆಗ್ತಿರೋದರಿಂದ ಕೊಂಡೋತ್ಸವದ ವೇಳೆ ಈ ದುರಂತ ಜರುಗಿದೆ. ಎಂದು ಭಕ್ತರು ಆರೋಪ ಮಾಡ್ತಾ ಇದ್ದಾರೆ. ಅಲ್ಲದೇ ದುರಂತದಿಂದ ಭಕ್ತರಲ್ಲಿ ಕೊಂಚ ಆತಂಕ ಶುರುವಾಗಿದ್ದು, ಗ್ರಾಮದಲ್ಲಿ ಯಾವುದೇ ಕೆಡುಕಾಗದಂತೆ ಕಾಪಾಡುವಂತೆ ಭಕ್ತರು ಬೇಡಿಕೊಳ್ಳುತ್ತಿದ್ದಾರೆ.

Author:

share
No Reviews