ತುಮಕೂರು : ಕಾರದ ಶಿವ ಯೋಗಿಗಳ ಕತೃ ಗದ್ದುಗೆ ಲೋಕಾರ್ಪಣೆಗೆ ಧ್ವಜಾರೋಹಣ

ಧ್ವಜಾರೋಹಣ ಮಾಡಿದ ಕಾರದೇಶ್ವರ ಮಠಾಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿ
ಧ್ವಜಾರೋಹಣ ಮಾಡಿದ ಕಾರದೇಶ್ವರ ಮಠಾಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿ
ತುಮಕೂರು

ತುಮಕೂರು :

ತುಮಕೂರು ತಾಲೂಕಿನ ಬೆಳ್ಳಾವಿಯ ಕಾರದ ಮಠದಲ್ಲಿ  ಶ್ರೀ ಶಿವ ಯೋಗಿಗಳ ಕತೃ ಗದ್ದುಗೆ ಲೋಕಾರ್ಪಣೆ ಸಮಾರಂಭಕ್ಕೆ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು. ಕಾರದೇಶ್ವರ ಮಠಾಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿಗಳು ಧ್ವಜಾರೋಹಣವನ್ನು ನೇರವೇರಿಸಿದರು.

ಕಾರ್ಯಕ್ರಮದಲ್ಲಿ  ಶ್ರೀ ಕಾರದೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಹೆಚ್.‌ ಎಸ್.‌ ರವಿಶಂಕರ್‌ , ರಮೇಶ್‌ ತರೂರು , ಕಿಡ್ಸ್‌ ಶಾಲೆಯ ಸಂಸ್ಥಾಪಕ ಸತೀಶ್ ಕುಮಾರ್‌ ಇತರರು ಇದ್ದರು.

ಕಾರದ ಮಠದ ಸ್ಥಾಪಕರಾದ ಕಾರದ ಶಿವಯೋಗಿ ತಮ್ಮ ಪವಾಡದಿಂದಲೇ ಪ್ರಸಿದ್ದರಾಗಿದ್ದವರು. ಒಣ ಮೆಣಸಿನಕಾಯಿ, ಬೆಳ್ಳುಳ್ಳಿ, ಬಿಲ್ವಪತ್ರೆ ಹಾಗೂ ಖಾರದ ಪದಾರ್ಥಗಳನ್ನೇ ತಿನ್ನುತ್ತಿದ್ದ ಕಾರಣ ಇವರನ್ನು ಕಾರದಯ್ಯ ಎಂದು ಕರೆಯುತ್ತಿದ್ದರು. ಆನಂತರ ಇದು ಕಾರದ ಮಠವಾಗಿದೆ. ಮಠದಲ್ಲಿ ಇಂದಿನಿಂದ ರಿಂದ 16 ರವರೆಗೆ ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಗಳು ನೇರವೆರಲಿವೆ ಎಂದು ಕಾರದ ಮಠದ ಅಧ್ಯಕ್ಷ ಕಾರದ ವೀರಬಸವ ಸ್ವಾಮೀಜಿ ತಿಳಿಸಿದ್ದಾರೆ. 

 

Author:

share
No Reviews