ನೈಸರ್ಗಿಕವಾಗಿ ಸಿಗುವ ತರಕಾರಿಗಳಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಇವೆ ಎನ್ನುವುದು ನಮಗೆಲ್ಲಾ ತಿಳಿದೇ ಇದೆ. ಹೀಗಾಗಿ ಇಂತಹ ತರಕಾರಿಗಳನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸಿದರೆ, ಆಗ ನಾನಾ ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಇದಕ್ಕೆ ನೀರಿನಾಂಶ ಹೆಚ್ಚಿರುವ ಸೋರೆಕಾಯಿ ಕೂಡ ಬಳಸಬಹುದು. ಹೆಚ್ಚಾಗಿ ಸೋರೆಕಾಯಿಯನ್ನು ಪಲ್ಯ, ಸಾಂಬಾರು ಇತ್ಯಾದಿಗಳಲ್ಲಿ ಬಳಕೆ ಮಾಡುವರು. ಅದೇ ರೀತಿಯಾಗಿ ಆರೋಗ್ಯ ಕಾಳಜಿ ಇರುವಂತಹ ಜನರು ಇದರ ಜ್ಯೂಸ್ ಕೂಡ ತಯಾರಿಸಿಕೊಂಡು ಕುಡಿಯುವರು.
ಸೋರೆಕಾಯಿ ಜ್ಯೂಸ್ ಕುಡಿದರೆ ಸುಲಭವಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಇದಕ್ಕಾಗಿ ಒಂದು ಮಧ್ಯಮ ಗಾತ್ರದ ಸೋರೆಕಾಯಿಯ ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ, ಮಿಕ್ಸಿ ಜಾರಿನಲ್ಲಿ ನುಣ್ಣಗೆ ರುಬ್ಬಿಕೊಂಡು, ಜ್ಯೂಸ್ ರೀತಿ ಮಾಡಿಕೊಂಡು, ದಿನಕ್ಕೆ ಎರಡು ಅಥವಾ ಮೂರು ಬಾರಿಯಂತೆ ಸೇವಿಸುತ್ತಾ ಬಂದರೆ, ದೇಹದ ತೂಕವನ್ನು ತಾವು ಬಯಸಿದಂತೆ, ಇಟ್ಟುಕೊಳ್ಳಬಹುದು. ಅಲ್ಲದೆ ಈ ವಿಡಿಯೋದಲ್ಲಿ ನೀಡಿರುವ ಶೀರ್ಷಿಕೆಯಲ್ಲಿಯೂ ಕೂಡ, ಈ ತರಕಾರಿಯ ಜ್ಯೂಸ್ ಮಾಡಿ ಕುಡಿಯುವುದರಿಂದ ಒಂದು ತಿಂಗಳಲ್ಲಿ 20 ಕೆಜಿ ತೂಕ ಕಡಿಮೆಯಾಗುತ್ತದೆ.