HEALTH TIPS : ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಮೊದಲು ಇದನ್ನೊಮ್ಮೆ ಟ್ರೈ ಮಾಡಿ

ಕಿತ್ತಲೆ ಹಣ್ಣಿನ ಸಿಪ್ಪೆ
ಕಿತ್ತಲೆ ಹಣ್ಣಿನ ಸಿಪ್ಪೆ
ಆರೋಗ್ಯ-ಜೀವನ ಶೈಲಿ

ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳ ಸಮೃದ್ಧ ಮೂಲವಾಗಿರುವ ಕಿತ್ತಳೆ ಹಣ್ಣು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ. ಸಾಮಾನ್ಯವಾಗಿ ನಾವು ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಕಿತ್ತಲೆ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಿಸುವ ಶಕ್ತಿಯಿಂದ ಹಿಡಿದು ಅನೇಕ ಪ್ರಯೋಜನಗಳಿವೆ. ಅದರಲ್ಲಿರುವ ವಿಟಮಿನ್ ಸಿ, ಫೈಬರ್ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಅಗತ್ಯ ಜೀವಸತ್ವ ಹಾಗೂ ಖನಿಜಗಳನ್ನು ಜೀವಕ್ಕೆ ಒದಗಿಸುತ್ತವೆ.

*ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಈಗಾಗಲೇ ನಿಮಗೆ ಹೇಳಿದಂತೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ ಇದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ. ಇದರಲ್ಲಿ ಆಂಟಿಮೈಕ್ರೋಬಿಯಾದಂತಹ ಅಂಶಗಳು ಇರುವುದರಿಂದ ಅನೇಕ ಸೋಂಕುಗಳಿಂದ ನಮ್ಮನ್ನು ದೂರವಿಡುತ್ತದೆ.

*ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು

ನಾರಿನ ಅಂಶ ಹೆಚ್ಚಾಗಿರುವ ಕಿತ್ತಳೆ ಹಣ್ಣಿನ ಸಿಪ್ಪೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಮರ್ಥಗೊಳಿಸುತ್ತದೆ. ಅಂದರೆ ನೀವು ತಿಂದ ಆಹಾರ ನಿಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣವಾಗುತ್ತದೆ, ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ

*ಉಸಿರಾಟದ ತೊಂದರೆಯಿಂದ ಮುಕ್ತಿ

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಆರಂಭದಿಂದಲೂ ಉಸಿರಾಟದ ತೊಂದರೆಯ ಚಿಕಿತ್ಸೆಗೆ ಬಳಸುತ್ತಾರೆ. ಅಸ್ತಮಾ ಶೀತದಂತಹ ಸಮಸ್ಯೆಗಳು ಇದ್ದವರು ಈ ಸಿಪ್ಪೆಯನ್ನು ಸೇವಿಸುವುದರಿಂದ ಎದೆಯಲ್ಲಿ ಗಟ್ಟಿಯಾಗಿರುವ ಕಫವನ್ನು ಕರಗಿಸಿ ದೇಹದಿಂದ ಹೊರಗೆ ಹಾಕುವಲ್ಲಿ ಸಹಾಯಕಾರಿಯಾಗುತ್ತದೆ.

*ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು

ಕಿತ್ತಳೆ ಹಣ್ಣಿನ ಸಿಪ್ಪೆ ನಮ್ಮ ಮನಸ್ಸನ್ನು ಸಹ ಪ್ರಶಾಂತಗೊಳಿಸುತ್ತದೆ. ನೀವು ಹಸಿ ಕಿತ್ತಳೆ ಹಣ್ಣಿನ ಸಿಪ್ಪೆ ಕೂಡ ವಾಸನೆ ತೆಗೆದುಕೊಳ್ಳಬಹುದು ಅಥವಾ ಒಣಗಿದ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಅಥವಾ ಪೌಡರ್ ಅನ್ನು ಹೊಗೆ ಹಾಕುವುದರಿಂದ ಅದರಿಂದ ಬರುವ ಸಣ್ಣನೆಯ ಸುವಾಸನೆ ನಿಮ್ಮ ಮನಸ್ಸಿಗೆ ಅತ್ಯಂತ ಪ್ರಶಾಂತಕರ ವಾತಾವರಣವನ್ನು ಕೊಡುತ್ತದೆ.

 

Author:

...
Sub Editor

ManyaSoft Admin

Ads in Post
share
No Reviews