PAVAGADA: ಪೌರ ಕಾರ್ಮಿಕನ ತಲೆಯ ಮೇಲೆ ಹರಿದ ಟ್ರಾಕ್ಟರ್..ಯುವಕ ಸಾವು

ಕಾರ್ಮಿಕನ ತಲೆಯ ಮೇಲೆ ಹರಿದ ಟ್ರಾಕ್ಟರ್
ಕಾರ್ಮಿಕನ ತಲೆಯ ಮೇಲೆ ಹರಿದ ಟ್ರಾಕ್ಟರ್
ತುಮಕೂರು

ಪಾವಗಡ: 

ಚಲಿಸುತ್ತಿದ್ದ ಟ್ರಾಕ್ಟರ್‌ನಿಂದ ಬಿದ್ದು ಪೌರ ಕಾರ್ಮಿಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಶನಿಮಹಾತ್ಮ ಸರ್ಕಲ್ ನಲ್ಲಿ ನಡೆದಿದೆ.

28 ವರ್ಷದ ಮಂಜುನಾಥ್ ಮೃತ ದುರ್ದೈವಿಯಾಗಿದ್ದಾರೆ. ಟ್ರಾಕ್ಟರ್‌ ಮೇಲೆ ಹೋಗುತ್ತಿದ್ದ  ವೇಳೆ ಟ್ರಾಕ್ಟರ್‌ ಮೇಲಿನಿಂದ ಕೆಳಗೆ ಬಿದ್ದ ತಕ್ಷಣ ತಲೆ ಮೇಲೆ ಟ್ರಾಕ್ಟರ್ ಹರಿದಿದೆ.

ಇನ್ನು ಕೆಳಗೆ ಬಿದ್ದು ತಲೆಯ ಮೇಲೆ ಟ್ರಾಕ್ಟರ್‌ ಹರಿದ ಪರಿಣಾಮ  ಗಂಭೀರ ಗಾಯಗೊಂಡಿದ್ದ ಮಂಜುನಾಥ್‌ನನ್ನು ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ  ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್‌ ಸಾವನಪ್ಪಿದ್ದಾರೆ. ಪಾವಗಡ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  

 

Author:

share
No Reviews