ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾತುರದಿಂದ ಕಾಯ್ತಾ ಇದ್ದ ಪಿಯು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದೆ. ನಾಳೆ ಪಿಯುಸಿ ಫಲಿತಾಂಶ ಪ್ರಕಟಿಸಲಿದೆ ಎಂದು ಶಿಕ್ಷಣ ಇಲಾಖೆ ಅಧಿಕೃತವಾಗಿ ತಿಳಿಸಿದೆ. ಮಾರ್ಚ್ 1 ರಿಂದ ಮಾರ್ಚ್ 20ರವರೆಗೆ ದ್ವೀತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ನಾಳೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಮಧ್ಯಾಹ್ನ 12:30 ಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಲಿದ್ದು, ಮಧ್ಯಾಹ್ನ 1:30ಕ್ಕೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳಲ್ಲಿ ಸಂತೋಷ, ಆತಂಕ ಹೆಚ್ಚಾಗಿದೆ.
ಇನ್ನು ಶಿಕ್ಷಣ ಇಲಾಖೆಯ karresult.nic.in ಹಾಗೂ kseab.karnataka.gov.in ಈ ಎರಡು ವೆಬ್‌ಸೈಟ್‌ಗಳಲ್ಲಿ ರಿಸಲ್ಟ್ ಪ್ರಕಟಿಸುವುದಾಗಿ ಇಲಾಖೆ ತಿಳಿಸಿದೆ. ಒಟ್ಟು 7 ಲಕ್ಷದ 13 ಸಾವಿರದ 862 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದರು. 6 ಲಕ್ಷದ 61 ಸಾವಿರದ 474 ಹೊಸ ವಿದ್ಯಾರ್ಥಿಗಳು ಹಾಗೂ 34 ಸಾವಿರದ 71 ವಿದ್ಯಾರ್ಥಿಗಳು, 18 ಸಾವಿರದ 317 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ವಿದ್ಯಾರ್ಥಿಗಳ ಭವಿಷ್ಯ ನಾಳೆ ಹೊರಬೀಳಲಿದೆ.
ಪಿಯು ವಿದ್ಯಾರ್ಥಿಗಳಿಗೆ ಪ್ರಜಾಶಕ್ತಿ ವತಿಯಿಂದ ಆಲ್ ದಿ ಬೆಸ್ಟ್. ಹಾಗೆ ಫಲಿತಾಂಶ ಅದೇನೆ ಬರಲಿ, ಸೋಲು ಗೆಲುವು ಕಾಮನ್, ಫೇಲ್ ಆಯಿತೆಂದು ಕುಗ್ಗುವುದು ಬೇಡ ಮತ್ತೆರಡು ತಿಂಗಳಲ್ಲಿ ಮರು ಪರೀಕ್ಷೆ ಇರಲಿದ್ದು ಚಿಂತೆ ಬೇಡ. ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಳ್ಳಿ ಬದಲಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳೋದು ಬೇಡ.
ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಬೇಕು.
– ಹೋಂ ಪೇಜ್‌ನಲ್ಲಿ Second PU Results 2025 ಲಿಂಕ್ ಕ್ಲಿಕ್ ಮಾಡಬೇಕು.
– ರಿಜಿಸ್ಟ್ರೇಷನ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಪಾಸ್‌ವರ್ಡ್ ನಮೂದಿಸಬೇಕು.
– Second PU Results 2025 ಎಂಬುದು ಸ್ಕ್ರೀನ್‌ನಲ್ಲಿ ಫಲಿತಾಂಶ ಸಿಗುತ್ತದೆ.