ಮೊಳಕೆಕಾಳುಗಳಲ್ಲಿ ಅತಿಹೆಚ್ಚು ಪ್ರೋಟೀನ್ ಅಂಶಗಳು ಇರುತ್ತದೆ. ಇದು ಸಸ್ಯಾಹಾರದಲ್ಲಿಯೇ ಅತಿಹೆಚ್ಚು ಪ್ರೋಟೀನ್ ಇರುವುದು ಈ ಕಾಳುಗಳಲ್ಲಿಯೇ. ಪೌಷ್ಠಿಕಾಂಶ ನಮ್ಮ ಸ್ನಾಯುಗಳಿಗೆ ಬಲ ತುಂಬುತ್ತದೆ. ಕಸರತ್ತು ಅಥವಾ ಜಿಮ್ ಮಾಡುವವರಿಗೆ ಕಡ್ಡಾಯವಾಗಿ ಇದನ್ನು ತಿನ್ನಲು ಹೇಳುತ್ತಾರೆ. ಕೇವಲ ಸ್ನಾಯು ಬಲವರ್ಧನೆಯಲ್ಲಿ ಮಾತ್ರವಲ್ಲ ಇಡೀ ದೇಹದ ಆರೋಗ್ಯಕ್ಕೆ ನೆನೆಸಿಟ್ಟ ಕಾಳುಗಳು ಸಹಾಯಕ.ಇದನ್ನು ಬೆಳಗಿನ ಉಪಹಾರದಲ್ಲಿ ಬಳಸುವುದರಿಂದ ತೃಪ್ತಿಕರವಾಗಿ ಹೊಟ್ಟೆ ತುಂಬ ಉಪಹಾರ ಮಾಡಿದ ಭಾವ ಮೂಡುತ್ತದೆ.
ನೆನೆಯಿಟ್ಟ ಹೆಸರು ಕಾಳುಗಳಲ್ಲಿ ವಿಟಮಿನ್ ಬಿ, ಕಬ್ಬಿಣ ಅಂಶ, ಮ್ಯಾಗ್ನೆಶಿಯಂ, ಪ್ರೋಟೀನ್ನಂತಹ ಅಂಶಗಳನ್ನು ಇರುವುದರಿಂದ ಇದು ನಿಮ್ಮ ದೇಹದ ಶಕ್ತಿವರ್ಧನೆಗೆ ಬಹಳ ಸಹಕಾರಿಯಾಗಿದೆ. ಇದರಲ್ಲಿರುವ ಪೌಷ್ಠಿಕಾಂಶ ದೇಹಕ್ಕೆ ಸರಬರಾಜು ಆಗುವ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ.
ನೆನೆಯಿಟ್ಟ ಕಾಳುಗಳಲ್ಲಿ ಹೆಚ್ಚು ಫೈಬರ್ ಅಂಶಗಳು ಕೂಡ ಇರುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಇದು ಸಹಾಯಕ. ಇದು ದೇಹದಲ್ಲಿರುವ ಸಕ್ಕರೆ ಅಂಶವನ್ನು ಹಾಗೂ ಪೆಥಿಟಿಕ್ ಆ್ಯಸಿಡ್ ಅಂಶವನ್ನು ಒಡೆದು ಹಾಕುತ್ತದೆ. ಈ ಮೂಲಕ ಜೀರ್ಣಶಕ್ತಿಗೆ ಹೆಚ್ಚು ಬಲ ಕೊಡುತ್ತದೆ.
ನೆನೆಯಿಟ್ಟ ಹೆಸರು ಕಾಳಿನಲ್ಲಿ ಗ್ಲೈಸೆಮಿಕ್ ಇಂಡೆಕ್ಷ್ ಅತ್ಯಂತ ಕಡಿಮೆ ಇರುತ್ತದೆ. ಅಂದ್ರೆ ಇದು ರಕ್ತದಲ್ಲಿ ಅತ್ಯಂತ ನಿಧಾನವಾಗಿ ಸಕ್ಕರೆ ಅಂಶವನ್ನು ಬಿಡುಗಡೆ ಮಾಡುತ್ತದೆ. ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದರಲ್ಲಿ ಸಹಾಯಕ. ಸಕ್ಕರೆ ಕಾಯಿಲೆಯಿಂದ ನರಳುವವರು ಈ ನೆನೆಯಿಟ್ಟ ಕಾಳುಗಳನ್ನು ತಿನ್ನುವುದರಿಂದ ದೇಹದಲ್ಲಿ ಹೆಚ್ಚಿನ ಶಕ್ತಿಯನ್ನು ಪಡೆಯಬಹುದು ಹಾಗೂ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಯೂ ಇಡಬಹುದು.