ತುಮಕೂರು:
ಫಸಲಿಗೆ ಬಂದ ಹಾಗೂ ಚಿಕ್ಕ ಚಿಕ್ಕ ಅಡಿಕೆ ಮರಗಳನ್ನು ಕತ್ತರಿಸಿ ನೀಚ ಕೃತ್ಯ. ಬೆಳೆಯನ್ನು ಕಳೆದುಕೊಂಡು ದಾರಿ ಕಾಣದೇ ಗೇಳಾಡುತ್ತಿರೋ ಅಕ್ಕ- ತಮ್ಮ, ಹುಟ್ಟಿದಾಗ ಅಣ್ಣ- ತಮ್ಮಂದಿರು ಬೆಳೆಯುತ್ತಾ. ಬೆಳೆಯುತ್ತಾ ದಾಯಾದಿಗಳು ಅನ್ನೋದನ್ನ ಕೊನೆಗೂ ಸಾಬೀತು ಮಾಡಿ ದ್ವೇಷ ಬಗಿಯುತ್ತಿರೋ ಅಣ್ಣ, ದೇವರ ಪೂಜೆ ಮಾಡುತ್ತಿದ್ರು ಮತ್ತೊಬ್ಬರಿಗೆ ಕೆಡುಕು ಮಾಡ್ತಿರೋ ಅರ್ಚಕ. ಇವೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ನಮ್ಮ ತುಮಕೂರು.
ಹುಟ್ಟಿದಾಗ ಅಣ್ಣ- ತಮ್ಮಂದಿರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳನ್ನು ಅನ್ನೋದನ್ನ ಇಲ್ಲೋಬ್ಬ ಕಿರಾತಕ ಅಣ್ಣ ನಿರೂಪಿಸಿ ತೋರಿಸಿದ್ದಾನೆ. ಮನೆಯ ಮೊದಲ ಮಗ ಮನೆಗೆ ಆಧಾರ, ಅವನು ತೆಗೆದುಕೊಳ್ಳುವ ನಿರ್ಧಾರಕ್ಕೆ ಇಡೀ ಕುಟುಂಬ ಬೆಂಬಲವಾಗಿ ನಿಲ್ಲುತ್ತೆ. ಆದ್ರೆ ಸ್ವಂತ ಅಣ್ಣನೇ ದ್ವೇಷದಿಂದ ಬಾಳಿದರೇ ಹೇಗೆ ಅನ್ನುವಂತಾಗಿದೆ. ಹೇಳಿ ಕೇಳಿ ಅವರು ಶನಿಮಹಾತ್ಮ ದೇವಸ್ಥಾನದ ಪ್ರಧಾನ ಅರ್ಚಕರು, ಆದ್ರೆ ಪೂಜೆ ಮಾಡುವಾಗ ಮಾತ್ರ ಸರ್ವರಿಗೂ ಒಳಿತಾಗಲಿ ಅಂತಾ ಪೂಜೆ ಮಾಡಿದ್ರೆ ಸಾಕೆ, ಅದ್ರಂತೆ ನಡೆದುಕೊಳ್ಳುವುದು ಧರ್ಮವಲ್ಲವೇ, ಆದ್ರೆ ಈ ಅರ್ಚಕರು ದುರಾಸೆಗೆ ಬಿದ್ದು ಸ್ವಂತದವರನ್ನು ಕಣ್ಣೀರಿನಲ್ಲಿ ಮುಳುಗಿಸುತ್ತಿದ್ದಾರೆ. ಇಂತಹ ಕೃತ್ಯವನ್ನು ಮಾಡಿದವರು ತುಮಕೂರು ನಗರದ ಚಿಕ್ಕಪೇಟೆ ಗಾರ್ಡನ್ ರಸ್ತೆಯಲ್ಲಿರುವ ಶನಿಮಹಾತ್ಮ ದೇವಸ್ಥಾನದ ಪ್ರಧಾನ ಅರ್ಚಕರಾದ ರಂಗಸ್ವಾಮಿ ಉರುಫ್ ರಾಜಣ್ಣ ಅಂತಾ.
ತುಮಕೂರಿನ ಗಾರ್ಡನ್ ರಸ್ತೆಯಲ್ಲಿರುವ ಅಮಾನಿಕೆರೆ ಸರ್ವೇ ನಂಬರ್ 282/6 ರಲ್ಲಿ ಸುಮಾರು 7 ಎಕರೆ ಜಮೀನು ಪಿತ್ರಾರ್ಜಿತ ಆಸ್ತಿ ಅರ್ಚಕರಾದ ರಂಗಸ್ವಾಮಿ ಸೇರಿ ಏಳು ಮಂದಿ ಸಹೋದರ- ಸಹೋದರಿಯರಿಗೆ ಸೇರಲಿದ್ದು, ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿದೆ. ಈ ಬಗ್ಗೆ ಜಿಲ್ಲಾ ನ್ಯಾಯಾಲಯವು ಕೂಡ ಜಮೀನು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂದು ತೀರ್ಪು ನೀಡಿದೆ. ಆದ್ರೆ ರಂಗಸ್ವಾಮಿ ತಮ್ಮ ಸಹೋದರರಿಗೆ ಆಸ್ತಿ ಪಾಲು ನೀಡದೇ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅನಿಲ್ ಕುಮಾರ್,ಲಕ್ಷ್ಮೀ, ಉಮಾ, ಗಂಗರತ್ನ ಎಂಬುವವರು ಆರೋಪ ಮಾಡ್ತಿದ್ದಾರೆ. ಇರುವ ಏಳು ಎಕರೆ ಜಮೀನಿನಲ್ಲಿ 30 ಗುಂಟೆಯಲ್ಲಿ ಅಡಕೆ ಗಿಡಗಳನ್ನು ನೆಟ್ಟಿದ್ದು, ಉಳಿದ ಜಮೀನಿನಲ್ಲಿ ಶನಿ ದೇವರ ದೇವಸ್ಥಾನ ಹಾಗೂ ಗದ್ದೆಯನ್ನು ಮಾಡಿಕೊಂಡು ಬರಲಾಗಿದೆ. ಲಕ್ಷ್ಮೀ ಎಂಬ ಸಹೋದರಿ ಹಾಗೂ ಸಹೋದರ ಅನಿಲ್ ಸೇರಿ ಅಡಿಕೆ ಗಿಡಗಳನ್ನು ಇಟ್ಟುಕೊಂಡಿದ್ದರು.. ಆದ್ರೆ ಏಕಾಏಕಿಯಾಗಿ ಸುಮಾರು 300 ರಿಂದ 400 ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ. ಹೈಕೋರ್ಟ್ನಲ್ಲಿ ಜಮೀನು ಸಂಬಂಧ ವಿಚಾರಣೆ ನಡೆಯುತ್ತಿದ್ದರೂ ಕೂಡ ಬೆಳೆ ನಾಶ ಮಾಡಲಾಗಿದ್ದು, ಲಕ್ಷ್ಮೀ ಹಾಗೂ ಅರುಣ್ ಆಕ್ರೋಶ ಹೊರಹಾಕ್ತಿದ್ದಾರೆ.
ಇನ್ನು ಫಸಲಿಗೆ ಬಂದ ಅಡಿಕೆಗಿಡ ಸೇರಿ ಚಿಕ್ಕ ಚಿಕ್ಕ ಅಡಿಕೆ ಗಿಡಗಳು ನಾಶವಾಗಿದ್ದಕ್ಕೆ ಲಕ್ಷ್ಮೀ ಕಣ್ಣೀರಾಕುತ್ತಿದ್ದಾರೆ. ಇದನ್ನು ಕೇಳಲು ಹೋದ್ರೆ ಚಚ್ಚಿ ಸಾಯಿಸಿ ಬಿಡ್ತೀವಿ ಅಂತಾ ನಮ್ಮನ್ನೇ ಹೆದರಿಸ್ತಾರೆ ಎಂದು ಸಹೋದರಿ ಲಕ್ಷ್ಮೀ ಅಳಲು ತೋಡಿಕೊಳ್ಳುತ್ತಿದ್ದಾರೆ.
ಅದೇನೆ ಆಗಲಿ ಆಸ್ತಿ ಪಾಲಾಗಿದ್ರು ಕೂಡ ಯಾರಿಗೂ ಕೊಡದೇ ವಂಚನೆ ಮಾಡ್ತಾ ಇದ್ದು ಬೆಳೆಯನ್ನು ನಾಶ ಮಾಡಿ ತಮ್ಮ ನೀಚ ಬುದ್ಧಿಯನ್ನು ತೋರಿಸಿದ್ದಾರೆ.. ಪಾಪದ ಕೆಲಸ ಮಾಡಿ ದೇವರಿಗೆ ಪೂಜೆ ಮಾಡಿದ್ರೆ ದೇವರು ಫಲ ಕೊಟ್ಟನೇ.. ಧರ್ಮ ಇದ್ದ ಕಡೆ ಎಂದಿಗೂ ದೇವರು ಇರ್ತಾನೆ ಅನ್ನೋ ಮಾತು ನಿಜ ಆಗುತ್ತಾ.. ಅನ್ಯಾಯ ಮಾಡ್ತಿರೋ ಅರ್ಚಕನಿಗೆ ಶಿಕ್ಷೆ ಆಗುತ್ತಾ ಎಂದು ಕಾದುನೋಡಬೇಕಿದೆ.