ಕಲಬುರಗಿ :
ಮಂಗಳ ಮುಖಿಯರೇ ಮಂಗಳಮುಖಿಯನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿರುವಂತಹ ಘಟನೆ ಕಲುಬುರಗಿಯ ಬಸ್ ನಿಲ್ದಾಣದ ಬಳಿ ನಡೆದಿದೆ. ಹಲ್ಲೆ ಬಳಿಕ ಅಂಕಿತ ಎಂಬ ಮಂಗಳಮುಖಿಯ ಕೇಶಮುಂಡನ ಮಾಡಿ ಮಂಗಳಮುಖಿಯರ ಗುಂಪು ಅಟ್ಟಹಾಸ ಮೆರೆದಿದೆ.
ಭಿಕ್ಷಾಟನೆ ಮಾಡಿದ ಹಣದಲ್ಲಿ ಪಾಲು ಕೊಡಲಿಲ್ಲ ಎಂಬ ಕಾರಣಕ್ಕೆ ಶೀಲಾ, ಮಾಲಾ, ಭವಾನಿ ಸೇರಿ ಆರು ಜನ ಮಂಗಳಮುಖಿಯರು ಅಂಕಿತಾ ಎಂಬ ಮಂಗಳಮುಖಿಗೆ ಹಲ್ಲೆ ಮಾಡಿದ್ದಾರೆ. ಇನ್ನು ಘಟನೆ ಅಶೋಕ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೋಲೀಸರು ಹಲ್ಲೆ ಮಾಡಿರುವ ಮಂಗಳಮುಖಿಯರ ಬಂಧನಕ್ಕೆ ಬಲೆ ಬೀಸಿದ್ದಾರೆ.